ಕರ್ನಾಟಕ

karnataka

ETV Bharat / state

ಚಾಮರಾಜನಗರ ಜಿಲ್ಲೆಯಲ್ಲಿಂದು 73 ಜನರಿಗೆ ಕೊರೊನಾ - ಚಾಮರಾಜನಗರ ಜಿಲ್ಲೆಯಲ್ಲಿಂದು 73 ಜನರಿಗೆ ಕೊರೊನಾ

ಚಾಮರಾಜನಗರ ಜಿಲ್ಲೆಯಲ್ಲಿಂದು 64 ಮಂದಿ ಕೊರೊನಾದಿಂದ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 712 ಆಗಿದೆ.

73  corona cases in chamarajangar
ಚಾಮರಾಜನಗರ ಜಿಲ್ಲೆಯಲ್ಲಿಂದು 73 ಜನರಿಗೆ ಕೊರೊನಾ

By

Published : Oct 11, 2020, 7:38 PM IST

ಚಾಮರಾಜನಗರ : ಜಿಲ್ಲೆಯಲ್ಲಿಂದು 73 ಕೊರೊನಾ ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 4926ಕ್ಕೆ ಏರಿಕೆಯಾಗಿದೆ.

ಇಂದು 64 ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 712 ಆಗಿದೆ. 36 ಮಂದಿ ಸೋಂಕಿತರು ಐಸಿಯುನಲ್ಲಿದ್ದು 212 ಮಂದಿ ಹೋಂ ಐಸೋಲೇಷನ್​​​ನಲ್ಲಿದ್ದಾರೆ‌. 1168 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ಮೃತರ ವಿವರ :

ಇಂದು ಕೊರೊನಾ ಹೊರತುಪಡಿಸಿ ಬೇರೆ ಕಾರಣದಿಂದ ಓರ್ವ ಸಾವನ್ನಪ್ಪಿದ್ದಾರೆ. ಹನೂರಿನ 30 ವರ್ಷದ ಮಹಿಳೆ ಕಿಡ್ನಿ ಸಮಸ್ಯೆ ಹಾಗೂ ಕ್ಷಯ ರೋಗದ ಕಾರಣದಿಂದ ಕಳೆದ 8 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದಾರೆ. ಇವರ ನಿಧನದ ಬಳಿಕ ಕೋವಿಡ್ ದೃಢಪಟ್ಟಿದೆ.

ABOUT THE AUTHOR

...view details