ಕರ್ನಾಟಕ

karnataka

ETV Bharat / state

ಮೈಸೂರು, ಚಾಮರಾಜನಗರದ ಇಂದಿನ ಕೊರೊನಾ ವರದಿ... - Chamarajanagara corona updates

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕೊರೊನಾ ವರದಿ ಇಲ್ಲಿದೆ...

ಕೊರೊನಾ ವರದಿ
ಕೊರೊನಾ ವರದಿ

By

Published : Oct 21, 2020, 6:15 PM IST

Updated : Oct 21, 2020, 8:40 PM IST

ಮೈಸೂರು: ಜಿಲ್ಲೆಯಲ್ಲಿ ಇಂದು 220 ಕೊರೊನಾ ಸೋಂಕಿತ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1,147 ಮಂದಿ ಡಿಸ್ಚಾರ್ಜ್ ಹಾಗೂ 3 ಜನ ಸಾವನ್ನಪ್ಪಿದಾರೆ.

ಕೋವಿಡ್ ಪ್ರಕರಣಗಳ ವಿವರ:

ಇಂದು 220 ಸೋಂಕಿತ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 45,864 ಕ್ಕೆ ಏರಿಕೆಯಾಗಿದೆ.

ಗುಣಮುಖ:

ಜಿಲ್ಲೆಯಲ್ಲಿಂದು ಒಂದೇ ದಿನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1,147 ಆಗಿದ್ದು, ಒಟ್ಟು 39,886 ಮಂದಿ ಗುಣಮುಖರಾದಂತಾಗಿದೆ. ಇನ್ನು ಜಿಲ್ಲೆಯಲ್ಲಿ 5,046 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರ ಮಾಹಿತಿ:

ಇಂದು ಜಿಲ್ಲೆಯಲ್ಲಿ ಕೊರೊನಾದಿಂದ ಮೂವರು ಮೃತಪಟ್ಟಿದ್ದು, ಆ ಮೂಲಕ ಸಾವನ್ನಪ್ಪಿದವರ ಸಂಖ್ಯೆ 932 ಆಗಿದೆ.

ಕೊರೊನಾ ವರದಿ

ಚಾಮರಾಜನಗರ: ಜಿಲ್ಲೆಯಲ್ಲಿಂದು 74 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5,625ಕ್ಕೆ ಏರಿಕೆಯಾಗಿದೆ.

ಇಂದು 52 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ಜಿಲ್ಲೆಯಲ್ಲಿ 662 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 39 ಮಂದಿ ಸೋಂಕಿತರು ಐಸಿಯುನಲ್ಲಿದ್ದು, 225 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ‌.

917 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

Last Updated : Oct 21, 2020, 8:40 PM IST

ABOUT THE AUTHOR

...view details