ಗಿಣಿ ತಿನ್ನಲು ಬಂದ ಹಾವು.. ಉರಗದ ಬಾಯಿಂದ ಗಿಣಿ ರಕ್ಷಿಸಿದ 5 ರ ಬಾಲಕ!
ತಾವು ಸಾಕಿದ ಮುದ್ದು ಗಿಣಿಯನ್ನು ಕಣ್ಣೆದುರೇ ಹಾವೊಂದು ಬೇಟೆಯಾಡುತ್ತಿರುವುದನ್ನು ಕಂಡ ಬಾಲಕ ಕಾರ್ತಿಕ್ ಕೂಡಲೇ ಹಾವನ್ನು ಎಳೆದಾಡಿ, ದೂರಕ್ಕೆ ಎಸೆದು ಗಿಣಿ ರಕ್ಷಿಸಿದ್ದಾನೆ..
ಹಾವಿನಿಂದ ಗಿಣಿ ರಕ್ಷಿಸಿದ ಬಾಲಕ
ಚಾಮರಾಜನಗರ: ಪಂಜರದಲ್ಲಿದ್ದ ಗಿಣಿ ತಿನ್ನಲು ಹೊಂಚು ಹಾಕುತ್ತಿದ್ದ ಹಾವನ್ನು ಬಾಲಕನೋರ್ವ ಎಳೆದು ಹಾಕಿ ತನ್ನ ಮುದ್ದಿನ ಗಿಣಿ ರಕ್ಷಿಸಿರುವ ಘಟನೆ ಚಾಮರಾಜನಗರದ ಹೊರವಲಯದ ತೋಟದ ಮನೆಯೊಂದರಲ್ಲಿ ನಡೆದಿದೆ.
ತಾವು ಸಾಕಿದ ಮುದ್ದು ಗಿಣಿಯನ್ನು ಕಣ್ಣೆದುರೇ ಹಾವೊಂದು ಬೇಟೆಯಾಡುತ್ತಿರುವುದನ್ನು ಕಂಡ ಬಾಲಕ ಕಾರ್ತಿಕ್ ಕೂಡಲೇ ಹಾವನ್ನು ಎಳೆದಾಡಿ, ದೂರಕ್ಕೆ ಎಸೆದು ಗಿಣಿ ರಕ್ಷಿಸಿದ್ದಾನೆ ಎಂದು ತಿಳಿದು ಬಂದಿದೆ.
ಬಾಲಕನ ಸಮಯ ಪ್ರಜ್ಞೆಯಿಂದ ಗಿಣಿ ಉಳಿದರೂ ಈ ಮೊದಲೇ ಗಾಯಗೊಂಡಿದ್ದ ಹಾವು ಸತ್ತಿದೆ ಎಂದು ತಿಳಿದು ಬಂದಿದೆ. ಆದರೆ, ಹಾವು ಕಂಡರೆ ದೊಡ್ಡವರೇ ಭಯಪಡುವಾಗ ಧೈರ್ಯ ಮಾಡಿದ ಬಾಲಕನ ಗಿಣಿ ಪ್ರೀತಿ ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.