ಚಾಮರಾಜನಗರ: ಮೊದಲ ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೂರನೇ ದಿನವಾದ ನಿನ್ನೆ ಒಟ್ಟು 488 ನಾಮಪತ್ರಗಳು ಸಲ್ಲಿಕೆಯಾಗಿವೆ.
ಗ್ರಾ.ಪಂ ಚುನಾವಣೆ : ಚಾಮರಾಜನಗರದಲ್ಲಿ 552 ನಾಮಪತ್ರಗಳು ಸಲ್ಲಿಕೆ - 488 nomination filled in Chamarajanagar
ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಹಿನ್ನೆಲೆ ಚಾಮರಾಜನಗರ ತಾಲೂಕಿನಲ್ಲಿ ಇದುವರೆಗೆ 380 ಮತ್ತು ಗುಂಡ್ಲುಪೇಟೆ ತಾಲೂಕಿನಲ್ಲಿ 172 ಸೇರಿದಂತೆ ಒಟ್ಟು 552 ನಾಮಪತ್ರಗಳು ಸಲ್ಲಿಕೆಯಾಗಿವೆ.
ಚಾಮರಾಜನಗರ
ಚಾಮರಾಜನಗರ ತಾಲೂಕಿನಲ್ಲಿ 336 ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ 152 ನಾಮಪತ್ರಗಳು ನಿನ್ನೆ ಸಲ್ಲಿಕೆಯಾಗಿವೆ. ಒಟ್ಟಾರೆ ಚಾಮರಾಜನಗರ ತಾಲೂಕಿನಲ್ಲಿ ಇದುವರೆಗೆ 380 ಮತ್ತು ಗುಂಡ್ಲುಪೇಟೆ ತಾಲೂಕಿನಲ್ಲಿ 172 ಸೇರಿದಂತೆ ಒಟ್ಟು 552 ನಾಮಪತ್ರಗಳು ಸಲ್ಲಿಕೆಯಾಗಿವೆ.