ಕರ್ನಾಟಕ

karnataka

ETV Bharat / state

ಇಂಥ ಕಳ್ಳರಿಂದ ಎಚ್ಚರದಿಂದಿರಿ! ಮೂರ್ಛೆ ಬರಿಸಿ ವೃದ್ಧೆಯ ಬಂಗಾರ ಕದ್ದೊಯ್ದರು!

ತರಕಾರಿ ಖರೀದಿಸುತ್ತಿದ್ದ ವೃದ್ಧೆಗೆ ಅಪರಿಚಿತರಿಬ್ಬರು, ನಿಮ್ಮ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುಳ್ಳು ಹೇಳಿ ವಾಹನದಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ. ಬಳಿಕ ಅವರಿಗೆ ಮೂರ್ಛೆ ಬರಿಸಿ ಬಳಿಯಿದ್ದ 37 ಗ್ರಾಂ ಬಂಗಾರವನ್ನು ದೋಚಿ ಪರಾರಿಯಾಗಿದ್ದಾರೆ.

ಬಂಗಾರ ಕಳೆದುಕೊಂಡ ಪುಟ್ಟಮ್ಮ

By

Published : Sep 21, 2019, 10:08 PM IST

ಚಾಮರಾಜನಗರ: ನಿಮ್ಮ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುಳ್ಳು ಹೇಳಿ ವೃದ್ಧೆಯೊಬ್ಬರಿಂದ ಅಪರಿಚಿತರು ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣ ಕೊಳ್ಳೇಗಾಲದಲ್ಲಿ ನಡೆದಿದೆ‌.

ಕೊಳ್ಳೇಗಾಲ ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದ ಪುಟ್ಟಮ್ಮ ಎಂಬವರು 37 ಗ್ರಾಂ ಚಿನ್ನಾಭರಣ ಕಳೆದುಕೊಂಡವರು.

ಬಂಗಾರ ಕಳೆದುಕೊಂಡ ಪುಟ್ಟಮ್ಮ

ನಗರದ ಹಳೇ ಅಂಚೆ ಕಚೇರಿ ಬಳಿ ಪುಟ್ಟಮ್ಮ ತರಕಾರಿ ಖರೀದಿಸುತ್ತಿದ್ದ ವೇಳೆ ಅಪರಿಚಿತ ಪುರುಷ ಮತ್ತು ಮಹಿಳೆ ಅವರ ಬಳಿ ಹೋಗಿ, ನಿಮ್ಮ ಮಗಳಿಗೆ ಹುಷಾರಿಲ್ಲ, ಆಕೆ, ನಮ್ಮ ಮಗಳಿರುವ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಗಾಬರಿಗೊಳಿಸಿ ಕರೆದೊಯ್ದಿದ್ದಾರೆ.

ನಂತರ ವೃದ್ಧೆಯನ್ನು ಜ್ಞಾನ ತಪ್ಪಿಸಿ, ಆಕೆಯ ಕೊರಳಿನಲ್ಲಿದ್ದ 25 ಗ್ರಾಂ ಕಾಸಿನ ಸರ, 6 ಗ್ರಾಂ 1 ಜೊತೆ ಓಲೆ ಹಾಗೂ ತಾಳಿ ಸಮೇತ ಬಿಚ್ಚಿಕೊಂಡು, ಆಕೆಯ ಸೀರೆಯ ಸೆರಗಿನಲ್ಲಿ ನಕಲಿ ಕಾಸಿನ ಸರ, ಓಲೆಗಳನ್ನು ಸುತ್ತಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ಎಚ್ಚರಗೊಂಡ ಬಳಿಕ ವೃದ್ದೆಗೆ ತಾನು ಮೋಸ ಹೋಗಿರುವುದು ತಿಳಿದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details