ಚಾಮರಾಜನಗರ: ಕಾವೇರಿ ಆರ್ಭಟಕ್ಕೆ ತುತ್ತಾಗಿ ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ 14 ಮಂದಿ ಸಂತ್ರಸ್ತರು ಅಸ್ವಸ್ಥರಾದ ಹಿನ್ನೆಲೆ ಕೊಳ್ಳೇಗಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
14 ಮಂದಿ ಪ್ರವಾಹ ಸಂತ್ರಸ್ತರು ಅಸ್ವಸ್ಥ: ಕೊಳ್ಳೇಗಾಲ ಆಸ್ಪತ್ರೆಗೆ ದಾಖಲು - ಕೊಳ್ಳೇಗಾಲ ಆಸ್ಪತ್ರೆ
ಕಾವೇರಿ ಆರ್ಭಟಕ್ಕೆ ತುತ್ತಾಗಿ ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ 14 ಮಂದಿ ಸಂತ್ರಸ್ತರು ಅಸ್ವಸ್ಥರಾದ ಹಿನ್ನೆಲೆ ಕೊಳ್ಳೇಗಾಲದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆಗೆ ಶಾಸಕ ಎನ್.ಮಹೇಶ್ ಭೇಟಿ ನೀಡಿದ್ದಾರೆ.
14 ಮಂದಿ ಸಂತ್ರಸ್ತರು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲು
ಹಳೇ ಆಣಗಳ್ಳಿ ಗ್ರಾಮದ ಪುಟ್ಟಮಾದಮ್ಮ, ಚಂದ್ರಮ್ಮ, ದೊಡ್ಡಮ್ಮ, ಸುಂದ್ರಮ್ಮ, ಮಹದೇವಮ್ಮ, ರಂಗಯ್ಯ, ವೆಂಕಟಯ್ಯ, ಮಾದಯ್ಯ ಸೇರಿದಂತೆ 14 ಮಂದಿಯನ್ನು ಕೊಳ್ಳೇಗಾಲದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜ್ವರ ಮತ್ತು ನಿಶಕ್ತಿಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಅಸ್ವಸ್ಥರಾದವರು ಎಲ್ಲರೂ 50 ವರ್ಷ ಮೇಲ್ಪಟ್ಟವರಾಗಿದ್ದು, ಆಹಾರದಲ್ಲಿ ಯಾವುದೇ ಏರುಪೇರಾಗಿಲ್ಲ ಎಂದು ಖಚಿತವಾಗಿದೆ. ಆಸ್ಪತ್ರೆಗೆ ಶಾಸಕ ಎನ್.ಮಹೇಶ್ ಭೇಟಿ ನೀಡಿ ಅಸ್ವಸ್ಥರಿಗೆ ಪ್ರತ್ಯೇಕ ವಾರ್ಡ್ನಲ್ಲಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.