ಚಾಮರಾಜನಗರ: ಪ್ರತ್ಯೇಕ ಪ್ರಕರಣಗಳಲ್ಲಿ ನೀರಿನ ಖಾಲಿ ತೊಟ್ಟಿಗಳಲ್ಲಿದ್ದ 10 ಹಾವಿನ ಮರಿಗಳನ್ನು ರಕ್ಷಿಸಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ನೀರಿನ ಖಾಲಿ ತೊಟ್ಟಿಯಲ್ಲಿ ಹಾವಿನ ಮರಿಗಳು ಪ್ರತ್ಯಕ್ಷ! - ಚಾಮರಾಜನಗರ ಸುದ್ದಿ
ಕೊಳ್ಳೇಗಾಲದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿನ ನೀರಿನ ಖಾಲಿ ತೊಟ್ಟಿಯಲ್ಲಿದ್ದ 7 ತೋಳ ಹಾವಿನ ಮರಿಗಳು, ದೇವಾಂಗಪೇಟೆಯಲ್ಲಿನ ಪಾರ್ವತಮ್ಮ ಎಂಬವರ ಮನೆಯೊಳಗೆ ನುಗ್ಗಿದ್ದ 2 ನಾಗರಹಾವಿನ ಮರಿಗಳು ಮತ್ತು ಭೀಮನಗರದಲ್ಲಿನ ಖಾಲಿ ವಾಟರ್ ಟ್ಯಾಂಕ್ನಲ್ಲಿದ್ದ ನೀರು ಹಾವಿನ ಮರಿಯೊಂದನ್ನು ಸ್ನೇಕ್ ರಾಘು ಎಂಬುವರು ರಕ್ಷಿಸಿದ್ದಾರೆ.
snake rescue
ಕೊಳ್ಳೇಗಾಲದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿನ ಖಾಲಿ ನೀರಿನ ತೊಟ್ಟಿಯಲ್ಲಿದ್ದ 7 ತೋಳ ಹಾವಿನ ಮರಿಗಳು, ದೇವಾಂಗಪೇಟೆಯಲ್ಲಿನ ಪಾರ್ವತಮ್ಮ ಎಂಬುವರ ಮನೆಯೊಳಗೆ ನುಗ್ಗಿದ್ದ 2 ನಾಗರಹಾವಿನ ಮರಿಗಳು ಮತ್ತು ಭೀಮನಗರದಲ್ಲಿನ ಖಾಲಿ ವಾಟರ್ ಟ್ಯಾಂಕ್ನಲ್ಲಿದ್ದ ನೀರು ಹಾವಿನ ಮರಿಯೊಂದನ್ನು ಸ್ನೇಕ್ ರಾಘು ಎಂಬುವರು ರಕ್ಷಿಸಿ ಸಮೀಪದ ಕಾಡಿಗೆ ಬಿಟ್ಟಿದ್ದಾರೆ.
ಕಾಮನ್ ವೂಲ್ಫ್ ಸ್ನೇಕ್ ಹಾಗೂ ನೀರು ಹಾವು ವಿಷಕಾರಿಯಲ್ಲ. ಸಾಮಾನ್ಯವಾಗಿ ಹಾವುಗಳು ಮೊಟ್ಟೆಯಿಟ್ಟು ಮರಿ ಮಾಡಿದ ಬಳಿಕ ಸ್ಥಳ ಬಿಡುತ್ತವೆ. ಸದ್ಯ, ಎಲ್ಲಾ ಹಾವುಗಳನ್ನು ಕಾಡಿಗೆ ಬಿಟ್ಡಿದ್ದಾರೆ.
Last Updated : May 19, 2021, 7:48 PM IST