ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಲೋಕಸಭೆ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದು, ಆದಷ್ಟು ಶೀಘ್ರವಾಗಿ ಅಭ್ಯರ್ಥಿ ಹೆಸರು ಘೋಷಣೆ ಆದರೆ ಅನುಕೂಲ ಎಂದು ಮಾಜಿ ಸಚಿವ ಹಾಗೂ ಲೋಕಸಭೆ ಟಿಕೆಟ್ ಆಕಾಂಕ್ಷಿ ವಿನಯ್ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ.
ಹು-ಧಾ ಕ್ಷೇತ್ರಕ್ಕೆ ಆರೇಳು ಮಂದಿ ಆಕಾಂಕ್ಷಿಗಳಿದ್ದೇವೆ: ವಿನಯ್ ಕುಲಕರ್ಣಿ - ಟಿಕೆಟ್
ಹುಬ್ಬಳ್ಳಿ-ಧಾರವಾಡದಲ್ಲಿ ನಾವು ಆರೇಳು ಮಂದಿ ಆಕಾಂಕ್ಷಿಗಳಿದ್ದೇವೆ. ಟಿಕೆಟ್ ಘೋಷಣೆ ಮಾಡೋದು ತಡವಾಗ್ತಿದೆ. ಹೀಗಾಗಿ ಯಾರಿಗಾದರೂ ಸರಿ, ಬೇಗ ಘೋಷಣೆ ಮಾಡುವಂತೆ ವಿನಯ್ ಕುಲಕರ್ಣಿ ಮನವಿ ಮಾಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಆರೇಳು ಮಂದಿ ಆಕಾಂಕ್ಷಿಗಳಿದ್ದೇವೆ. ಟಿಕೆಟ್ ಘೋಷಣೆ ಮಾಡೋದು ತಡವಾಗ್ತಿದೆ. ಹೀಗಾಗಿ ಯಾರಿಗಾದರೂ ಸರಿ, ಬೇಗ ಘೋಷಣೆ ಮಾಡುವಂತೆ ಮನವಿ ಮಾಡಿದ್ದೇವೆ. ಬೇಗ ಟಿಕೆಟ್ ನೀಡಿದರೆ ಕೆಲಸ ಮಾಡೋದು ಸುಲಭವಾಗುತ್ತದೆ. ಹೀಗಾಗಿಯೇ ಇಂದು ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ. ನನಗೆ ಕೊಡಿ ಅಂತ ನಾನು ವಾದ ಮಾಡಲ್ಲ ಎಂದರು.
ನಮ್ಮ ನಾಲ್ಕೈದು ಮಂದಿಯಲ್ಲಿ ಯಾರಿಗಾದರೂ ನೀಡಲಿ. ನಾವೆಲ್ಲ ಒಟ್ಟಾಗಿಯೇ ಕೆಲಸ ಮಾಡುತ್ತೇವೆ. ಈ ಬಾರಿ ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದೆ. ಪ್ರಹ್ಲಾದ್ ಜೋಶಿಗೆ ಸ್ಥಳೀಯ ಆಡಳಿತ ವಿರೋಧಿ ಅಲೆ ಇದೆ. ಇದರ ಸದುಪಯೋಗ ನಮಗೆ ಸಿಗಲಿದೆ ಎಂದರು.