ಕರ್ನಾಟಕ

karnataka

ETV Bharat / state

ಮನ್ಸೂರ್ ಖಾನ್ ರಕ್ಷಣೆಗೆ ಪೊಲೀಸ್ ಇಲಾಖೆ ಸಿದ್ಧ: ಎಸ್​ಐಟಿ ರವಿಕಾಂತೇಗೌಡ

ಐಎಂಎ ಜ್ಯುವೆಲ್ಲರಿ ಮುಖ್ಯಸ್ಥ ಮನ್ಸೂರ್ ಖಾನ್ ವಿಡಿಯೋ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ, ಮನ್ಸೂರ್​​​ ಎಲ್ಲಿದ್ದಾನೆ ಎಂಬ‌ ಮಾಹಿತಿ ಗೊತ್ತು ಹಾಗೂ ಆತ ವಿಡಿಯೋದಲ್ಲಿ ಹೇಳಿದ ಹೆಸರಿನವರು ನಿಜಾವಾಗ್ಲು ಐಎಂಎ ದೋಖಾದಲ್ಲಿ ಭಾಗಿಯಾಗಿದ್ರೆ ತನಿಖೆ ನಡೆಸುತ್ತೇವೆ ಎಂದು ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.

ರಕ್ಷಣೆಗೆ ಪೊಲೀಸ್ ಇಲಾಖೆ ಸಿದ್ದ

By

Published : Jun 24, 2019, 2:48 PM IST

ಬೆಂಗಳೂರು:ಭಾನುವಾರ ಮನ್ಸೂರ್ ವಿಡಿಯೋ ಬಿಡುಗಡೆ ಮಾಡಿದ್ದನ್ನು ಗಮನಿಸಲಾಗಿದೆ. ಹಾಗೆ ಆ ವಿಡಿಯೋದಲ್ಲಿ ಆತ ರಕ್ಷಣೆ ಕೋರಿದ್ದು, ಆತನಿಗೆ ರಕ್ಷಣೆ ಕೊಡಲು ನಮ್ಮ ಪೊಲೀಸ್ ಇಲಾಖೆ ಸಿದ್ಧವಿದೆ ಎಂದು ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಐಎಂಎ ಜ್ಯುವೆಲ್ಲರಿ ವಂಚನೆ ಆರೋಪಿ ಮನ್ಸೂರ್​​​ ಎಲ್ಲಿದ್ದಾನೆ ಎಂಬ‌ ಮಾಹಿತಿ ಗೊತ್ತು. ತನಿಖೆಯ ದೃಷ್ಟಿಯಿಂದ ಕೆಲ ವಿಚಾರ ಗೌಪ್ಯವಾಗಿಡಬೇಕು. ಐಎಂಎ ತನಿಖೆ ತೀವ್ರಗತಿಯಲ್ಲಿ ಚುರುಕುಗೊಳಿಸಿದ್ದೀವಿ. ಕಂಪನಿಯ‌ ಮಾಲೀಕ ಮನ್ಸೂರ್ ಎಲ್ಲಿ ಆಸ್ತಿ ಮಾಡಿದ್ದಾನೆ ಅನ್ನೋದ್ರ ಮಾಹಿತಿಯನ್ನ ಕಲೆಹಾಕಿದ್ದೀವಿ. ಹಾಗೆಯೇ ಪ್ರಾಥಮಿಕ ಹಂತವಾಗಿ ಕಂಪನಿಯ 12 ಜನ ನಿರ್ದಶಕರಾದ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ತಿಳಿಸಿದರು.‌

ಮನ್ಸೂರ್​ಗೆ ರಕ್ಷಣೆ ಕೊಡಲು ಪೊಲೀಸ್ ಇಲಾಖೆ ಸಿದ್ಧ: ಎಸ್​ಐಟಿ ರವಿಕಾಂತೇಗೌಡ

ಮನ್ಸೂರ್ ವಿಡಿಯೋ ಬಿಡುಗಡೆ ಮಾಡಿದ್ದನ್ನು ಗಮನಿಸಲಾಗಿದೆ. ಆ ವಿಡಿಯೋದಲ್ಲಿ ಮನ್ಸೂರ್​​ ರಕ್ಷಣೆ ಕೋರಿದ್ದಾನೆ, ಆತನಿಗೆ ಹಾಗೂ ಆತನ ಕುಟುಂಬಕ್ಕೆ ರಕ್ಷಣೆ ಕೊಡಲು ನಮ್ಮ ಪೊಲೀಸ್ ಇಲಾಖೆ ಸಿದ್ಧವಿದೆ. ಆದ್ರೆ ಆತ ವಿಡಿಯೋದಲ್ಲಿ ಕೆಲ ರಾಜಕಾರಣಿಗಳ ಹೆಸರನ್ನ ಹೇಳಿದ್ದಾನೆ. ಆತನ ಹೇಳಿಕೆ ಸತ್ಯ ಇರಬಹುದು, ಸುಳ್ಳು ಇರಬಹುದು. ಮನ್ಸೂರ್​ ಹೇಳಿದ ಹೆಸರಿನವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದಿಲ್ಲ. ಆತ ಹೇಳಿದ ಹೆಸರಿನವರು ನಿಜಾವಾಗ್ಲು ಐಎಂಎ ಜ್ಯುವೆಲ್ಲರಿ ಹಗರಣದಲ್ಲಿ ಭಾಗಿಯಾಗಿದ್ರೆ ತನಿಖೆ ನಡೆಸುತ್ತೇವೆ ಎಂದು ಎಸ್ ಐ ಟಿ ಮುಖ್ಯಸ್ಥ ರವಿಕಾಂತೇಗೌಡ ವಿವರಿಸಿದರು.

ABOUT THE AUTHOR

...view details