ಹಾಸನ: ಕೊಳೆವೆ ಬಾವಿಗೆ ಅಳವಡಿಸಿದ್ದ ಮೋಟರ್ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಚಿಗಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತರಿಗೂ ಬಿಡಲಿಲ್ಲ ಕಳ್ಳರ ಕಾಟ : ಸಂಕಷ್ಟದಲ್ಲಿ ಅನ್ನದಾತ - kannada news
ರೈತರನ್ನು ಬಿಡದ ಖದೀಮರು ಕೊಳೆವೆ ಬಾವಿಗೆ ಅಳವಡಿಸಿದ್ದ ಮೋಟರ್ ಕಳ್ಳತನ ಮಾಡಿ ಪರಾರಿ, ಜಿಲ್ಲೆಯ ಚಿಗಹಳ್ಳಿ ಗ್ರಾಮದಲ್ಲಿ ನಡೆದ ಘಟನೆ,
HASANA
ತಡರಾತ್ರಿ ತಮ್ಮಯ್ಯ ಎಂಬ ರೈತನ ಕೊಳವೆ ಬಾವಿಗೆ ಕನ್ನ ಹಾಕಿರುವ ಖದೀಮರು ರೊಲ್ ಪೈಪ್ ಗೆ ಅಳವಡಿಸಿದ್ದ ಸುಮಾರು 20 ಸಾವಿರ ಬೆಲೆಬಾಳುವ ಮೋಟರ್ ಕದ್ದು ಪರಾರಿಯಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಮೂರು ಕೊಳವೆ ಬಾವಿಗಳ ಕೇಬಲ್ ಕತ್ತರಿಸಿಕೊಂಡು ಹೋಗಿದ್ದು. ಕಳ್ಳರ ಹಾವಳಿಗೆ ಬೇಸತ್ತ ರೈತರು ಬೇಳೆದ ಬೇಳೆಗೆ ನೀರಿನ ಅಗತ್ಯವಿದ್ದು, ಕಳ್ಳರು ಈ ಕೃತ್ಯದಿಂದ ಮುಂದೇನು ಮಾಡಬೇಕೆಂದು ದಿಕ್ಕೇ ತೋಚದಂತಾಗಿದೆ ಎಂಬುದು ರೈತರ ಮಾತು.