ಬೆಂಗಳೂರು: ಫೆಬ್ರವರಿ 15 ರಿಂದ ಮಾರ್ಚ್ 4ರ ವರೆಗೆ ನಡೆದ ಸಿಬಿಎಸ್ಸಿ 10ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. 17,74,299 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಶೇ 91.10 ರಷ್ಟು ಫಲಿತಾಂಶ ದಾಖಲಾಗಿದೆ.
ಸಿಬಿಎಸ್ಸಿ 10ನೇ ತರಗತಿ ರಿಸಲ್ಟ್ ಔಟ್... ತುಮಕೂರಿನ ಯಶಸ್, ಧಾರವಾಡದ ಗಿರಿಜಾ ಟಾಪರ್ಸ್
ಸಿಬಿಎಸ್ಸಿ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ. ಶೇ 91.10 ರಷ್ಟು ಫಲಿತಾಂಶ ದಾಖಲು. ಬಿಬಿಎಂಪಿ ಮೇಯರ್ ಗಂಗಾಂಭಿಕೆ ಪುತ್ರ ಪ್ರಜ್ವಲ್ಗೆ 95%.
ಸಿಬಿಎಸ್ಸಿ 10ನೇ ತರಗತಿ ಪರೀಕ್ಷೆಯಲ್ಲಿ ಚೆನ್ನೈ ವಿಭಾಗ ಶೇಕಡ 99ರಷ್ಟು ರಿಸಲ್ಟ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಇನ್ನು ಈ ವಿಭಾಗದಲ್ಲಿ ಕರ್ನಾಟಕದ 6 ವಿದ್ಯಾರ್ಥಿಗಳು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ತುಮಕೂರಿನ ಯಶಸ್. ಡಿ ಕರ್ನಾಟಕದ ಟಾಪರ್ ಆಗಿದ್ದಾರೆ. ಯಶಸ್ 500ಕ್ಕೆ 498 ಅಂಕಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ. ಇನ್ನು ಗಿರಿಜಾ ಎಂ ಹೆಗಡೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಧಾರವಾಡದ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡಿದ ಈ ವಿದ್ಯಾರ್ಥಿನಿ 500 ಕ್ಕೆ 497 ಅಂಕಗಳಿಸಿದ್ದಾಳೆ.
ಬಿಬಿಎಂಪಿ ಮೇಯರ್ ಗಂಗಾಂಭಿಕೆ ಪುತ್ರ ಪ್ರಜ್ವಲ್ ಎಂ ಹೆಚ್ಚು ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿ ಗಮನ ಸೆಳೆದಿದ್ದಾನೆ. ಬೆಂಗಳೂರಿನ ಜೆಎಸ್ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ಪ್ರಜ್ವಲ್ ಶೇಕಡ 95 ರಷ್ಟು ರಿಸಲ್ಟ್ ಪಡೆದು ಬೆಂಗಳೂರಿಗೆ ಕೀರ್ತಿ ತಂದಿದ್ದಾನೆ.