ಕರ್ನಾಟಕ

karnataka

ETV Bharat / state

ಚುನಾವಣೆ ಬಿಸಿಯಲ್ಲಿ ಮುಚ್ಚೊಯ್ತು ನೀರಿಗಾಗಿ ಯುವಕ ಕಾಲು ಕಳೆದುಕೊಂಡ ಘಟನೆ! - ಕುಡಿಯುವ ನೀರು

ಬಾವಿಯಲ್ಲಿ ಬೀಳುವ ನೀರನ್ನು ಪೈಪ್​ಗೆ ಬಿಂದಿಗೆ ಹಾಕಿ ಅಪಾಯಕಾರಿಯಾಗಿ ನೀರು ತುಂಬಿಕೊಳ್ಳುವ ಸಾಹಸ ಮಾಡಲಾಗುತ್ತೆ. ಆದ್ರೆ ಇದೇ ವೇಳೆಯಲ್ಲಿ ಯುವಕ ಆಯತಪ್ಪಿ ಬಾವಿಗೆ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡ ಬಬನ ನನ್ನು ಮಹಾರಾಷ್ಟ್ರದ ಉದಗೀರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ನೀರಿನ ದುರಂತ ಘಟನೆ

By

Published : Apr 26, 2019, 11:31 PM IST

ಬೀದರ್:ಚುನಾವಣೆ ಭರಾಟೆಯಲ್ಲಿ ಭಯಂಕರ ಕುಡಿಯುವ ನೀರಿನ ಸಮಸ್ಯೆಯಲ್ಲಿ ಒದ್ದಾಡಿ ಎರಡು ಕಾಲು ಕಳೆದುಕೊಂಡ ಯುವಕನ ನೋವಿನ ಘಟನೆ ರಾಜಕೀಯ ಧೂಳಿನಲ್ಲಿ ಮುಚ್ಚಿಯೋದ ಘಟನೆ ನಡೆದಿದೆ.

ಜಿಲ್ಲೆಯ ಕಮಲನಗರ ತಾಲೂಕಿನ ಚಿಮ್ಮೆಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿರ್ಕಿ ತಾಂಡದಲ್ಲಿ ಚುನಾವಣೆಗೂ ಮೊದಲ ದಿನ ತಾಂಡದ ಸಾರ್ವಜನಿಕ ಬಾವಿಯಲ್ಲಿ ನೀರು ತರಲು ಹೊಗಿ ಯುವಕ ಬಬನ ಎಕನಾಥ್ ರಾಠೋಡ ಎಂಬಾತ ಆಳವಾದ ಬಾವಿಯಲ್ಲಿ ಬಿದ್ದು ಎರಡು ಕಾಲು ಮುರಿದುಕೊಂಡಿದ್ದಾನೆ.

ನೀರಿನ ದುರಂತ ಘಟನೆ

ಕಳೆದ ಎರಡು ತಿಂಗಳಿನಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಬೊರ್ವೆಲ್ ಮೂಲಕ ಸಾರ್ವಜನಿಕ ಕುಡಿಯುವ ಬಾವಿಗೆ ನೀರು ಸರಬರಾಜು ಮಾಡಲಾಗುತ್ತೆ. ಈ ವೇಳೆಯಲ್ಲಿ ಬಾವಿಯಲ್ಲಿ ಬೀಳುವ ನೀರನ್ನು ಪೈಪ್​ಗೆ ಬಿಂದಿಗೆ ಹಾಕಿ ಅಪಾಯಕಾರಿಯಾಗಿ ನೀರು ತುಂಬಿಕೊಳ್ಳುವ ಸಾಹಸ ಮಾಡಲಾಗುತ್ತೆ. ಆದ್ರೆ ಇದೇ ವೇಳೆಯಲ್ಲಿ ಯುವಕ ಆಯತಪ್ಪಿ ಬಾವಿಗೆ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡ ಬಬನ ನನ್ನು ಮಹಾರಾಷ್ಟ್ರದ ಉದಗೀರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಗ್ರಾಮದಲ್ಲಿ ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ ಜಟಿಲಗೊಂಡಿದ್ದಕ್ಕೆ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ABOUT THE AUTHOR

...view details