ಬಸವಕಲ್ಯಾಣ:ಕಟ್ಟಿಗೆ ತರಲೆಂದು ಹೊಲಕ್ಕೆ ಹೋದ ವೇಳೆ ಮಹಿಳೆಗೆ ಹಾವು ಕಡಿದು ಆಕೆ ಸಾವಿಗೀಡಾದ ದುರ್ಘಟನೆ ತಾಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದಿದೆ.
ಬಸವಕಲ್ಯಾಣದಲ್ಲಿ ಹಾವು ಕಚ್ಚಿ ಮಹಿಳೆ ಸಾವು - ಹಾವು ಕಚ್ಚಿ ಮಹಿಳೆ ಸಾವು
ಕಟ್ಟಿಗೆ ತರಲು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ಹಾವು ಕಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಬಸವಕಲ್ಯಾಣ: ಹಾವು ಕಚ್ಚಿ ಮಹಿಳೆ ಸಾವು
ಗಂಗಮ್ಮ ಹೊನ್ನಪ್ಪ ಮೇತ್ರೆ(45) ಮೃತ ಮಹಿಳೆ.
ಈಕೆ ಕಟ್ಟಿಗೆ ತರುವುದಕ್ಕಾಗಿ ಹೊಲಕ್ಕೆ ತೆರಳಿದ ವೇಳೆ ಹಾವು ಕಚ್ಚಿದೆ. ವಿಷಯ ಗೊತ್ತಾದ ತಕ್ಷಣ ಗಾಯಾಳುವನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೀದರ್‌ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.