ಬಸವಕಲ್ಯಾಣ(ಬೀದರ್):ಬೆಳೆದು ನಿಂತ ಕಬ್ಬಿನ ಗದ್ದೆಗೆ ನುಗ್ಗಿದ ಕಾಡುಹಂದಿಗಳ ಹಿಂಡು, ಲಕ್ಷಾಂತರ ರೂ. ಮೌಲ್ಯದ ಕಬ್ಬಿನ ಬೆಳೆ ಹಾನಿ ಮಾಡಿರುವ ಘಟನೆ ತಾಲೂಕಿನ ಕಾಂಬಳೆವಾಡಿಯಲ್ಲಿ ನಡೆದಿದೆ.
ಕಬ್ಬಿನ ಗದ್ದೆಗಳ ಮೇಲೆ ಕಾಡುಹಂದಿಗಳ ದಾಳಿ.. ಲಕ್ಷಾಂತರ ಮೌಲ್ಯದ ಬೆಳೆೆ ಹಾನಿ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕಾಂಬಳೆವಾಡಿ ವ್ಯಾಪ್ತಿಯಲ್ಲಿ ರಾತ್ರಿಯಾಗುತ್ತಿದ್ದಂತೆ ಹಿಂಡು ಹಿಂಡಾಗಿ ದಾಳಿ ನಡೆಸುವ ಹಂದಿಗಳು, ಕಬ್ಬು ತಿನ್ನುವುದಲ್ಲದೆ ಅಪಾರ ಪ್ರಮಾಣದ ಬೆಳೆ ಹಾನಿ ಮಾಡುತ್ತಿವೆ.
ಕಾಂಬಳೆವಾಡಿ ವ್ಯಾಪ್ತಿಯಲ್ಲಿ ರಾತ್ರಿಯಾಗುತ್ತಿದ್ದಂತೆ ಹಿಂಡು ಹಿಂಡಾಗಿ ದಾಳಿ ನಡೆಸುವ ಹಂದಿಗಳು, ಕಬ್ಬು ತಿನ್ನುವುದಲ್ಲದೆ ಅಪಾರ ಪ್ರಮಾಣದ ಬೆಳೆ ಹಾನಿ ಮಾಡುತ್ತಿವೆ. ಕಾಡು ಹಂದಿಗಳ ಹಾವಳಿಯಿಂದಾಗಿ ರಾತ್ರಿ ವೇಳೆ ಹೊಲ-ಗದ್ದೆಗಳಿಗೆ ಹೋಗಲು ಹೆದರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತಿದ್ದಾರೆ. ಭಾನುವಾರ ರಾತ್ರಿ ವಿಶ್ವನಾಥ ಗೋಧೆ ಎಂಬುವವರ 4 ಎಕರೆ ಗದ್ದೆಗೆ ನುಗ್ಗಿದ ಹಂದಿಗಳು, ಗದ್ದೆಯಲ್ಲಿ ಬೆಳೆದು ನಿಂತಿದ್ದ ಕಬ್ಬಿನ ಬೆಳೆ ಹಾನಿ ಮಾಡಿವೆ. ಹಂದಿಗಳ ದಾಳಿಯಿಂದಾಗಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ಹಾನಿಯಾಗಿದೆ.
ಕಳೆದ 15 ದಿನಗಳಿಂದ ಕಾಂಬಳೆವಾಡಿ ವ್ಯಾಪ್ತಿಯ ಸುಮಾರು 20ಕ್ಕೂ ಹೆಚ್ಚು ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದ್ದು, ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವ ಜೊತೆಗೆ ಕಾಡು ಹಂದಿಗಳನ್ನು ನಿಯಂತ್ರಿಸುವಂತೆ ರೈತರು ಮನವಿ ಮಾಡಿದ್ದಾರೆ.