ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ರಾಜಕೀಯವಾಗಿ ಬೆಳೆಯಲು ಸಂಖ್ಯಾ ಶಾಸ್ತ್ರದ ಬಲವಿದೆ ಅಂತೆ. ಹೀಗಂತಾ ಖುದ್ದು ಪ್ರಭು ಚೌಹಾಣ್ ತಮ್ಮ ಲಕ್ಕಿ ನಂಬರ್ನ ರಹಸ್ಯ ಹೊರ ಹಾಕಿದ್ದಾರೆ.
ಪ್ರಭು ಚೌಹಾಣ್‌ಗೆ ಎಲ್ಲಾ ‘2’ ಯಾಕೆ? ‘ಎರಡ’ರ ಗುಟ್ಟು ಬಿಚ್ಚಿಟ್ಟ ಸಚಿವ.. - Prabhu chavan news
ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ರಾಜಕೀಯವಾಗಿ ಬೆಳೆಯಲು ಸಂಖ್ಯಾ ಶಾಸ್ತ್ರದ ಬಲವಿದೆ ಅಂತೆ. ಹೀಗಂತಾ ಖುದ್ದು ಪ್ರಭು ಚೌಹಾಣ್ ತಮ್ಮ ಲಕ್ಕಿ ನಂಬರ್ನ ರಹಸ್ಯ ಹೊರ ಹಾಕಿದ್ದಾರೆ.
ಜಿಲ್ಲೆಯ ಔರಾದ್ ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2ನನ್ನ ಲಕ್ಕಿ ನಂಬರ್. ನನ್ನ ವಾಹನದ ನಂಬರ್‌ಗಳೆಲ್ಲಾ 2 ಅಂತಲೇ ಇದೆ. ನನ್ನ ಜೀವನದಲ್ಲಿ ಸಂಖ್ಯೆ 2 ಬಹಳ ಮಹತ್ವದ್ದು ಎಂದು ತಿಳಿಸಿದರು.
ಎರಡು ತಾಲೂಕುಗಳಾದ ಔರಾದ್ ಮತ್ತು ಕಮಲನಗರ ಕ್ಷೇತ್ರದ ಶಾಸಕ, ಬೀದರ್ ಮತ್ತು ಯಾದಗಿರಿ ಎರಡು ಜಿಲ್ಲೆಗಳು ಉಸ್ತುವಾರಿ ಸಚಿವ ಅಷ್ಟೇ ಅಲ್ಲ, ಪಶು ಸಂಗೋಪನೆ ಹಾಗೂ ಅಲ್ಪ ಸಂಖ್ಯಾತ ಕಲ್ಯಾಣ ಖಾತೆಗಳು ಎರಡು ನನಗೆ ವಹಿಸಲಾಗಿದೆ. ಹೀಗಾಗಿ ಎರಡು ಸಂಖ್ಯೆ ಬಹಳ ಲಕ್ಕಿ ಎಂದು ಹೇಳಿದರು.