ಬಸವಕಲ್ಯಾಣ: ಕಲ್ಯಾಣ ಕರ್ನಾಟಕದ ಸಮಗ್ರ ವಿಕಾಸಕ್ಕೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ದುಡಿಯುತ್ತೇನೆ ಎನ್ನುವ ಸಂಕಲ್ಪದೊಂದಿಗೆ ಕಲ್ಯಾಣ ಕರ್ನಾಟಕ ಸಂಸತ್ತು, ಯುವಕರ ಬೃಹತ್ ಸಮಾವೇಶಕ್ಕೆ ತೆರೆ ಬಿದ್ದಿದೆ.
ಕಲ್ಯಾಣ ಕರ್ನಾಟಕ ಸಂಸತ್ತು, ಯುವಕರ ಬೃಹತ್ ಸಮಾವೇಶ ನಗರದ ರಥ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾರತೀಯ ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ ಬಸವರಾಜ ಸೇಡಂ ಅವರು ಯುವಕರಿಗೆ ಪ್ರತಿಜ್ಞಾವಿದಿ ಬೋಧಿಸಿದರು. ಸಮಾವೇಶಕ್ಕೆ ಚಾಲನೆ ನೀಡಿದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪರಿವರ್ತನೆ ತರುವ ಶಕ್ತಿ ಯುವಕರಲ್ಲಿ ಅಡಗಿದೆ. ಯುವಕರು ತಮ್ಮಲ್ಲಿರುವ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಪರಿವರ್ತನೆಯ ಹರಿಕಾರರು ಆಗಬೇಕಿದೆ. ಯುವಕರಲ್ಲಿನ ಶಕ್ತಿ, ಸಾಮರ್ಥ್ಯವನ್ನು ಜಾಗೃತಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಂಕಲ್ಪ, ಸಾಹಸ ಮತ್ತು ಸೇವೆ ಸೂತ್ರಗಳು ಮಾನವನ ಬದುಕಿನ ಅತ್ಯವಶ್ಯಕವಾಗಿವೆ. ದೃಢವಾದ ಸಂಕಲ್ಪದೊಂದಿಗೆ, ಜೀವನದಲ್ಲಿ ಎದುರಾಗುವ ಕಷ್ಟ ನೋವು, ಸೋಲು, ಸವಾಲುಗಳನ್ನು ಎದುರಿಸಿ ಮುನ್ನುಗ್ಗುವ ಸಾಹಸ ಮತ್ತು ಜನ್ಮ ನೀಡಿದ ತಂದೆ-ತಾಯಿಗೆ ನಿಸರ್ಗ ಮತ್ತು ದೇಶ ಸೇವೆ ಮಾಡುವ ಮನೋಭಾವ ಯುವಕರಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಬಳಿಕ ಚಿಂತಕ, ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಮನುಷ್ಯನ ಜೀವನದಲ್ಲಿ ಜ್ಞಾನ ಶಕ್ತಿ, ಇಚ್ಛಾಶಕ್ತಿ ಹಾಗೂ ಕ್ರೀಯಾ ಶಕ್ತಿ ಸೂತ್ರಗಳು ಬೆಳೆಸಿಕೊಂಡಾಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.
ಸಮಾರೋಪ ಸಮರಂಭದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದೇವರು, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ರಾಜೇಶ್ವರ ಶಿವಾಚಾರ್ಯರು, ಶಾಸಕ ಬಿ.ನಾರಾಯಣ ರಾವ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಸ್ವಾಗತ ಸಮಿತಿ ಅಧ್ಯಕ್ಷ ಧನರಾಜ ತಾಳಂಪಳ್ಳಿ, ಚಾಣಕ್ಯ ಕರಿಯರ್ ಅಕಾಡೆಮಿಯ ಎನ್.ಎಂ. ಬಿರಾದಾರ, ಡಾ.ಎಸ್. ಬಲಬೀರಸಿಂಗ್, ಪ್ರಮುಖರಾದ ರೇವಣಸಿದ್ಧಪ್ಪ ಜಲಾದೆ, ಸೂರ್ಯಕಾಂತ ನಾಗಮಾರಪಳ್ಳಿ, ಬಸವರಾಜ ಪಾಟೀಲ್ ಅಷ್ಟೂರ್, ಸುನೀಲ ಪಾಟೀಲ್, ಅನೀಲಕುಮಾರ ರಗಟೆ, ಸುಧೀರ ಕಾಡಾದಿ, ಗುಂಡುರೆಡ್ಡಿ, ಶರಣು ಸಲಗರ್, ಅಶೋಕ ನಾಗರಾಳೆ, ರೇವಣಪ್ಪ ರಾಯವಾಡೆ, ಸುಭಾಷ ಹೊಳಕುಂದೆ, ಬಸವರಾಜ ಬಾಲಿಕಿಲೆ, ಶಿವರಾಜ ನರಶೆಟ್ಟಿ, ಪ್ರದೀಪ ವಾತಡೆ, ಸಂಜು ಕಾಳೇಕರ್, ಬಸವರಾಜ ಕೋರಕೆ, ಶಿವಕುಮಾರ ಬಿರಾದಾರ, ಎಸ್.ಪಿ, ಬಿರಾದಾರ ಉಪಸ್ಥಿತರಿದ್ದರು.