ಬಸವಕಲ್ಯಾಣ (ಬೀದರ್) : ಗುಡುಗು ಮಿಂಚು ಬಿರುಗಾಳಿಯೊಂದಿಗೆ ಸುರಿದ ಅಕಾಲಿಕ ಮಳೆಯಲ್ಲಿ, ಸಿಡಿಲು ಬಡಿದು ಎರಡು ಜಾನುವಾರು ಮೃತಪಟ್ಟ ಘಟನೆ ತಾಲೂಕಿನ ಉಮಾಪುರ ಗ್ರಾಮದಲ್ಲಿ ನಡೆದಿದೆ.
ಗುಡುಗು ಮಿಂಚಿನೊಂದಿಗೆ ಸುರಿದ ಮಳೆ: ಸಿಡಿಲಿಗೆ ಜಾನುವಾರು ಬಲಿ - premature rainfall news
ಬಸವಕಲ್ಯಾಣದಲ್ಲಿ ಭಾರಿ ಮಳೆ ಸುರಿದಿದ್ದು ಸಿಡಿಲು ಬಡಿದು 60 ಸಾವಿರಕ್ಕೂ ಅಧಿಕ ಬೆಲೆ ಬಾಳುವ ಎರಡು ಜಾನುವಾರುಗಳು ಮೃತಪಟ್ಟಿವೆ.
ಸಿಡಿಲಿಗೆ ಎರಡು ಜಾನುವಾರು ಬಲಿ
ಗ್ರಾಮದ ಅವಿನಾಶ ವೆಂಕಟ್ ಪಂಚಾಳ ಎನ್ನುವರಿಗೆ ಸೇರಿದ 1 ಆಕಳು ಮತ್ತು 1 ಎಮ್ಮೆ ಸಿಡಿಲಿಗೆ ಬಲಿಯಾಗಿವೆ. ತನ್ನ ಜಮೀನಿನ ಮರದ ಕೆಳಗೆ ಕಟ್ಟಿದ ಸುಮಾರು 60 ಸಾವಿರಕ್ಕೂ ಅಧಿಕ ಬೆಲೆ ಬಾಳುವ 2 ಜಾನುವಾರುಗಳು ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿವೆ.
ಇನ್ನು ಘಟನೆ ಬಗ್ಗೆ ಮಾಹಿತಿ ಪಡೆದ ಪಶು ವೈದ್ಯ ಡಾ: ಮಂಜುನಾಥ ಮುಂಗಳೆ ಹಾಗೂ ಗ್ರಾಮೀಣ ಠಾಣೆ ಪಿಎಸ್ಐ ವಸಿಮ್ ಪಟೇಲ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.