ಬೀದರ್:ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳು ಕಲ್ಬುರ್ಗಿ ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ಕ್ಷೇತ್ರಗಳನೊಳನ್ನೊಳಗೊಂಡ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಹೈ ಟೆನ್ಷನ್ ಫೈಟ್ ನಡೆದಿದೆ. ಘಟಾನುಘಟಿ ನಾಯಕರು ಬಿರುಸಿನ ಪ್ರಚಾರ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಭರ್ಜರಿ ಕ್ಯಾಂಪೇನ್ ಮಾಡಿದ್ದರು.
28 ಗ್ರಾಮಗಳ ಜನರ ಮುನಿಸು ವಿಭಿನ್ನ ತೀರ್ಪಿಗೆ ಮುನ್ನುಡಿ ಬರೆಯುತ್ತಾ?
ಈ ಬಾರಿ ಎಲೆಕ್ಷನ್ನಲ್ಲಿ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ ಎಂದು ೨೮ ಗ್ರಾಮಗಳ ರೈತರು ಮುನಿಸಿಕೊಂಡಿದ್ದರೆ, ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಹರಿಸಿಲ್ಲ ಎಂದು ಅದೇಷ್ಟೋ ಜನ ರೈತರು ಆಕ್ರೋಶ ಹೊರ ಹಾಕಿದ್ದರು. ಇದು ರಾಜ್ಯ ಸರ್ಕಾರದ ವೈಫಲ್ಯದ ಮೇಲೆ ಪ್ರಭಾವ ಬೀರುತ್ತಾ ಇಲ್ಲವೇ ಕೇಂದ್ರದ ಮೇಲೆ ಅನ್ನೋದು ಫಲಿತಾಂಶದ ಬಳಿಕವೇ ಗೊತ್ತಾಗಲಿದೆ.
ಲಿಂಗಾಯತ, ಮರಾಠ ಮತಗಳೇ ನಿರ್ಣಾಯಕ!
ಈ ಬಾರಿ ಚುನಾವಣೆಯಲ್ಲಿ ಲಿಂಗಾಯತ ಮತ್ತು ಮರಾಠ ಸಮುದಾಯದ ಮತದಾರರೇ ನಿರ್ಣಾಯಕ ಪಾತ್ರ ವಹಿಸಲಿದ್ದು, ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳು ಲಿಂಗಾಯತರಾಗಿರುವುದರಿಂದ ಮತದಾರ ಯಾರ ಪರ ಮತ ಹಾಕಿದ್ದಾನೆ ಎಂಬುದೇ ಚಿದಂಬರ ರಹಸ್ಯವಾಗಿ ಉಳಿದುಕೊಂಡಿದೆ.