ಬಸವಕಲ್ಯಾಣ:ದೇವಸ್ಥಾನಕ್ಕೆ ಆಗಮಿಸಿದ ಕಳ್ಳನೊಬ್ಬ ಅಲ್ಲಿ ಕಟ್ಟಿದ ಘಂಟೆಗಳನ್ನು ಕದ್ದು ಪರಾರಿಯಾದ ಘಟನೆ ತಾಲೂಕಿನ ಹಿಪ್ಪರಗಾ ಘಾಟ್ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದ ಘಂಟೆಗಳನ್ನೂ ಬಿಡಲಿಲ್ಲ ಈ ಕಳ್ಳ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಬಸವಕಲ್ಯಾಣ ತಾಲೂಕಿನ ಹಿಪ್ಪರಗಾ ಘಾಟ್ ಗ್ರಾಮ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಿಪ್ಪರಗಾ ಘಾಟ್ ಗ್ರಾಮದಲ್ಲಿ ಕಳ್ಳನೊಬ್ಬ ದೇವಸ್ಥಾನದ ಘಂಟೆಗಳನ್ನು ಕದ್ದು ಪರಾರಿಯಾಗಿದ್ದಾನೆ. ಗ್ರಾಮದಿಂದ ಸುಮಾರು 500 ಮೀಟರ್ನಷ್ಟು ದೂರದ ಗುಡ್ಡಗಾಡು ಪ್ರದೇಶದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.
ಗ್ರಾಮದಿಂದ ಸುಮಾರು 500 ಮೀಟರ್ನಷ್ಟು ದೂರದ ಗುಡ್ಡಗಾಡು ಪ್ರದೇಶದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಳ್ಳ ಬಂದಿದ್ದಾನೆ. ದೇವಸ್ಥಾನದಲ್ಲಿ ಕಟ್ಟಿದ 5 ಬೆಲೆ ಬಾಳುವ ಘಂಟೆಗಳನ್ನು ಕದ್ದು ನಂತರ ಬಟ್ಟೆಯನ್ನು ಕಳಚಿ ದೇವಸ್ಥಾನದ ಆವರಣದಲ್ಲಿ ನಗ್ನವಾಗಿ ಓಡಾಡಿದ್ದಾನೆ. ಅಲ್ಲೇ ಇದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕಳ್ಳನ ಕೈಚಳಕ ಹಾಗೂ ಈತನ ಲೈಂಗಿಕ ವಿಕೃತಿ ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಕೆಲ ದಿನಗಳ ಹಿಂದೆ ದೇವಸ್ಥಾನದಲ್ಲಿನ ಮೂರ್ತಿ (ಕಲ್ಲಿನ ಮೂರ್ತಿ)ಯೊಂದನ್ನು ಕಳವು ಮಾಡಿದ ಘಟನೆ ನಡೆದಿತ್ತು. ಮೂರ್ತಿ ಕಳವು ಪ್ರಕರಣದ ನಂತರ ದೇವಸ್ಥಾನದ ಹಲವೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಘಂಟೆಗಳನ್ನು ಕದ್ದ ಕಳ್ಳನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯಿಂದ ಮುಡಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.