ಬೀದರ್:ಬಡತನದಲ್ಲೇ ಬೆಳೆದ ಬಾಲಕಿ ತಾಂಡಾದಿಂದ 8 ಕಿ.ಮೀಟರ್ ದೂರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೂರನೇ ಸ್ಥಾನ ಶೇ.99.04 ಅಂಕ ಪಡೆದು ಸಾಧನೆ ಮಾಡಿದ್ದಾಳೆ. ಇದೀಗ ಅಲ್ಲಿಗೆ ತೆರಳಿ ಸಚಿವ ಪ್ರಭು ಚವ್ಹಾಣ ಸನ್ಮಾನ ಮಾಡಿದ್ದಾರೆ.
ಇದನ್ನು ಓದಿ: 8 ಕಿ.ಮೀ. ನಡೆದು ಸರ್ಕಾರಿ ಶಾಲೆಯಲ್ಲಿ ಓದಿದ ಬಾಲೆ: ಜಿಲ್ಲೆಗೆ 3ನೇ ಸ್ಥಾನ ಪಡೆದ ವಿದ್ಯಾರ್ಥಿನಿ
ಜಿಲ್ಲೆಯ ಔರಾದ್ ತಾಲೂಕಿನ ಖೀಮಾ ನಾಯಕ್ ತಾಂಡಾದ ಅರುಣಾ ಎಂಬ ವಿದ್ಯಾರ್ಥಿನಿ ಔರಾದ್ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಎಸ್ಎಸ್ಎಲ್ಸಿ ಯಲ್ಲಿ ಜಿಲ್ಲೆಗೆ 3ನೇ ಸ್ಥಾನ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. 8 ಕಿಲೋ ಮಿಟರ್ ನಡೆದುಕೊಂಡು ಬಂದು ಜಿಲ್ಲೆಗೆ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿರುವ ವಿಧ್ಯಾರ್ಥಿನಿ ಅರುಣಾ ಸಂಜು ರಾಠೋಡ್ಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಇದೀಗ ಪ್ರೋತ್ಸಾಹಿಸಿದ್ದಾರೆ.
ವಿದ್ಯಾರ್ಥಿನಿ ಮನೆ ಬಾಗಿಲಿಗೆ ಹೊಗಿ ಸನ್ಮಾನ ಮಾಡಿರುವ ಸಚಿವರು ಸ್ವಂತ ಶಾಸಕರ ವೇತನದಿಂದ ಸಾಧನೆ ಮಾಡಿದ ವಿಧ್ಯಾರ್ಥಿನಿಗೆ 16,000 ರೂಪಾಯಿ ನಗದು ಪ್ರೋತ್ಸಾಹ ನೀಡಿದ್ದಾರೆ. ಇದರ ಜತೆಗೆ ಮುಂದಿನ ವ್ಯಾಸಂಗಕ್ಕೆ ಅಗತ್ಯ ಸಹಕಾರ ಮಾಡುವುದಾಗಿ ಭರವಸೆ ನೀಡಿದ್ದಾರೆ. ವಿಧ್ಯಾರ್ಥಿನಿ ಸಾಧನೆ ಕುರಿತು 'ಈಟಿವಿ ಭಾರತ' 8 ಕಿ.ಮೀ. ನಡೆದು ಸರ್ಕಾರಿ ಶಾಲೆಯಲ್ಲಿ ಓದಿದ ಬಾಲೆ: ಜಿಲ್ಲೆಗೆ 3ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಎಂಬ ಹೆಸರಿನಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಲಾಗಿತ್ತು.