ಬೀದರ್:ಕಾಲೇಜು ಕ್ಲಾಸ್ ರೂಂಗಳಲ್ಲಿರುವ ಕರಿ ಹಲಗೆ, ಗೋಡೆಗಳು.. ಹೀಗೆ ಎಲ್ಲೆಂದರಲ್ಲಿ ಪುಢಾರಿಗಲು ಅಶ್ಲೀಲ ಚಿತ್ರಗಳ ವೆಬ್ ಲಿಂಕ್ ಬರೆದಿದ್ದಾರೆ. ಇದರಿಂದ ವಿದ್ಯಾರ್ಥಿಗಳು, ಉಪನ್ಯಾಸಕರು ಕಾಲೇಜಿಗೆ ಬರಲು ಮುಜುಗರ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್ ಜಿಲ್ಲೆ ಔರಾದ್ ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಈ ದೃಶ್ಯಗಳು ಕಂಡು ಬಂದಿದೆ.
ಸನ್ನಿ ಲಿಯೋನ್ ಚಿತ್ರಗಳ ವೆಬ್ ಲಿಂಕ್ ಜತೆಗೆ ಪ್ರಾಚಾರ್ಯರ ಫೋನ್ ನಂಬರ್ ಹಾಕಿ, ಮನಸ್ಸಿಗೆ ಬಂದಂತೆ ಬರೆದಿದ್ದಾರೆ. ಇದರಿಂದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಕಿರಿಕಿರಿ ಉಂಟಾಗಿದೆ.
ಕಳೆದ 5 ವರ್ಷಗಳಿಂದ ಕಟ್ಟಡದ ಸಮಸ್ಯೆ ಎದುರಿಸುತ್ತಿದ್ದ ಕಾಲೇಜಿಗೆ ಈಚೆಗೆ ಪಟ್ಟಣದಿಂದ 2 ಕಿಮೀ ದೂರದ ಗುಡ್ಡವೊಂದರಲ್ಲಿ ನೂತನ ಕಾಲೇಜು ಕಟ್ಟಡ ನಿರ್ಮಿಸಿಕೊಡಲಾಗಿತ್ತು. ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೇ ಇರುವುದರಿಂದ ಸಂಜೆಯಾಗುತ್ತಿದ್ದಂತೆ ಕಾಲೇಜು ಅಕ್ರಮಗಳ ಅಡ್ಡೆಯಾಗಿ ಮಾರ್ಪಡುತ್ತಿದೆ.
ಉನ್ನತ ವ್ಯಾಸಂಗಕ್ಕಾಗಿ ಪಟ್ಟಣದಿಂದ ಇಷ್ಟು ದೂರು ಬರಬೇಕಿದೆ. ಎಲ್ಲೆಂದರಲ್ಲಿ ಉಗುಳಿದ ಕಲೆಗಳು, ಮನಸೋ ಇಚ್ಚೆ ಬರೆದ ಬರಹಗಳು. ಇವೆಲ್ಲವೂ ಕಾಲೇಜಿನ ವಾತಾವರಣವನ್ನು ಹದಗೆಡಿಸಿವೆ ಎಂದು ವಿದ್ಯಾರ್ಥಿನಿಯರು ತಮ್ಮ ಗೋಳು ಹೇಳಿಕೊಂಡರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ವಿದ್ಯಾಮಂದಿರಗಳು ಕೀಡಿಗೇಡಿಗಳ ಪುಂಡಾಟದಿಂದ ನಿಯಂತ್ರಿಸಬೇಕಿದೆ. ಕೂಡಲೇ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಬೇಕು. ಕುಡಿಯುವ ನೀರು, ಭದ್ರತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ವಿದ್ಯಾರ್ಥಿಗಳು, ಉಪನ್ಯಾಸಕರ ಆಗ್ರಹವಾಗಿದೆ.