ಬೀದರ್: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು ಸಾರ್ವಜನಿಕರು ನೀರಿನೊಂದಿಗೆ ಸಾಹಸ ಮಾಡುವ ಪ್ರಯತ್ನ ಮಾಡಬಾರದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಸೂಚನೆ ನೀಡಿದ್ದಾರೆ.
ನೀರಿನೊಂದಿಗೆ ಸಾಹಸ ಮಾಡದಿರಲು ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್...!
ಬೀದರ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು ಸಾರ್ವಜನಿಕರು ನೀರಿನೊಂದಿಗೆ ಸಾಹಸ ಮಾಡುವ ಪ್ರಯತ್ನ ಮಾಡಬಾರದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್. ಆರ್ ಸೂಚನೆ ನೀಡಿದ್ದಾರೆ.
ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಈ ವೇಳೆಯಲ್ಲಿ ಯುವಕರು ಈಜಾಡುವುದು, ಸಾಹಸ ಮಾಡುವುದು ಗಮನಕ್ಕೆ ಬಂದಿದೆ. ಬೀದರ್ ತಾಲೂಕಿನ ಬಾವಗಿ ಗ್ರಾಮದ ಕೆರೆಯ ಹೊರ ಹರಿವಿನ ದಂಡೆಯ ಮೇಲೆ ಕೆಲವರು ಸಾಹಸ ಮಾಡಿರುವುದು ಗಮಕ್ಕೆ ಬಂದಿದ್ದು ಇಂಥ ದುಸ್ಸಾಹಸಕ್ಕೆ ಯಾರೂ ಮುಂದಾಗಬಾರದು ಎಂದು ಹೇಳಿದ್ದಾರೆ.
ಅಲ್ಲದೆ ಮಳೆ ನಡುವೆ ಬಿರುಗಾಳಿ ಇರುವುದರಿಂದ ಕೆಲವೆಡೆ ವಿದ್ಯುತ್ ತಂತಿಗಳು ನೀರಿನಲ್ಲಿ ಬಿದ್ದಿರುವ ಸಾಧ್ಯತೆಗಳಿರುತ್ತವೆ. ಸೇತುವೆ ಮೇಲಿಂದ ನೀರು ಹಾದು ಹೋಗುವಾಗ ವಾಹನಗಳು ಸಂಚರಿಸಬಾರದು. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳುವ ಮೂಲಕ ಪ್ರಾಕೃತಿಕ ವಿಕೋಪದಿಂದ ದೂರವಿರುವಂತೆ ಡಿಸಿ ಮನವಿ ಮಾಡಿದ್ದಾರೆ.