ಕರ್ನಾಟಕ

karnataka

By

Published : May 29, 2020, 10:06 PM IST

ETV Bharat / state

ಪರೀಕ್ಷೆಗೂ ಮುನ್ನವೇ ಕ್ವಾರಂಟೈನ್ ಕೇಂದ್ರದಿಂದ 6 ಜನ ಪರಾರಿ: ಭಯಭೀತರಾದ ಗ್ರಾಮಸ್ಥರು

ಭಾಲ್ಕಿ ತಾಲೂಕಿನ ವಾಂಜರಖೇಡಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ವಾರಂಟೈನ್ ಕೇಂದ್ರದಲ್ಲಿ 49 ಜನರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿ ಕೆಲವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿರಲಿಲ್ಲ. ಈ ಪೈಕಿ 6 ಜನರು ಯಾರಿಗೂ ಹೇಳದೇ ಪರಾರಿಯಾಗಿದ್ದು, ಕೇಂದ್ರದ ಅವ್ಯವಸ್ಥೆಗೆ ಬೇಸತ್ತು ಹೋಗಿದ್ದಾರೆ ಎನ್ನಲಾಗಿದೆ.

six people escape from Quarantine Center even before test
ಬೀದರ್: ಪರೀಕ್ಷೆಗೂ ಮುನ್ನವೇ ಕ್ವಾರಂಟೈನ್ ಕೇಂದ್ರದಿಂದ 6 ಜನ ಪರಾರಿ, ಭಯಭೀತರಾದ ಗ್ರಾಮಸ್ಥರು

ಬೀದರ್: ಜಿಲ್ಲೆಗೆ ಬಂದ ನೆರೆ ರಾಜ್ಯದ ಜನರನ್ನು ಕ್ವಾರಂಟೈನ್ ಕೇಂದ್ರದಲ್ಲಿಡಲಾಗಿದ್ದು, ಪರೀಕ್ಷೆಗೂ ಮುನ್ನವೇ 6 ಜನರು ಕೇಂದ್ರದಿಂದ ಪರಾರಿಯಾಗಿದ್ದು, ಗ್ರಾಮಸ್ಥರಲ್ಲಿ ಕೊರೊನಾ ಭೀತಿ ಹೆಚ್ಚಾಗಲು ಕಾರಣವಾಗಿದೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ವಾಂಜರಖೇಡಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಕಳೆದ 20 ದಿನಗಳಿಂದ 49 ಜನರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, 14 ದಿನಗಳಾದರೂ ಕೆಲವರಿಗೆ ವೈದ್ಯಕೀಯ ತಪಾಸಣೆ ಹಾಗೂ ಗಂಟಲುದ್ರವ ಪಡೆಯಲಿಲ್ಲ. ಹೀಗಾಗಿ ಈ ಪೈಕಿ 6ಜನರು ಕೇಂದ್ರದಿಂದ ಯಾರಿಗೂ ಹೇಳದೇ ತಮ್ಮ ಮನೆಗಳಿಗೆ ಹೋಗಿದ್ದಾರೆ ಎನ್ನಲಾಗಿದೆ.

ಹೈದರಾಬಾದ್​​​, ಮಹಾರಾಷ್ಟ್ರದ ಪುಣೆ ನಗರದಿಂದ ಆಗಮಿಸಿದ್ದ 8 ಮಕ್ಕಳು 18 ಜನ ಮಹಿಳೆಯರು ಸೇರಿದಂತೆ ಒಟ್ಟು 49 ಜನರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಬುಧವಾರ 35 ಜನರ ಗಂಟಲು ದ್ರವ ಪಡೆದಿದ್ದಾರೆ. ವರದಿ ಬರಲು ವಿಳಂಬವಾಗಿದ್ದಕ್ಕೆ ಕೆಲವರನ್ನು ಮನೆಗೆ ತೆರಳಲು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಉಳಿದವರ ಪೈಕಿ 6 ಜನ ಯಾರಿಗೂ ಹೇಳದೇ ಹೊಗಿದ್ದು ಸಾಕಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಸೌಲಭ್ಯಗಳ ಕೊರತೆ ಆರೋಪ:

ವಾಜರಖೇಡ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಶಾಲೆಯಲ್ಲಿ ಫ್ಯಾನ್ ಇಲ್ಲ, ಶೌಚಾಲಯ ಇಲ್ಲ, ಸರಿಯಾದ ಊಟ ಸಿಗ್ತಿಲ್ಲ, ಅವ್ಯವಸ್ಥೆ ನಡುವೆ ನಮಗೆ ಇರಲಿಕ್ಕಾಗೊಲ್ಲ ಅದಕ್ಕೆ ನಾವು ಮನೆಗೆ ಬಂದಿದ್ದೇವೆ ಎಂದು ಆರೋಪಿಸಲಾಗಿದೆ. ಇನ್ನೂ ಪರೀಕ್ಷೆ ಮಾಡಿಸಿಕೊಳ್ಳದೇ ಕ್ವಾರಂಟೈನ್ ಕೇಂದ್ರದಿಂದ ಓಡಿ ಹೋದ 6 ಜನರನ್ನು ವಾಪಸ್​​ ಕರೆ ತರಲಾಗುವುದು, ಯಾವುದೇ ಕಾರಣಕ್ಕೂ ಸಾರ್ವಜನಿಕರು ಭಯ ಪಡಬಾರದು ಎಂದು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಹೇಳಿದ್ದಾರೆ.

ABOUT THE AUTHOR

...view details