ಬಸವಕಲ್ಯಾಣ(ಬೀದರ್):ಅ, ಆ, ಇ, ಈ ಎಂದು ಏನೂ ಅರಿಯದ ಮಕ್ಕಳಿಗೆ ಪಾಠ ಹೇಳುವ ಅಂಗನವಾಡಿ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ಅಂಗನವಾಡಿ ಶಿಕ್ಷಕಿ ಜತೆ ರಾಸಲೀಲೆಯಲ್ಲಿ ತೊಡಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.
ಅಂಗನವಾಡಿ ಶಿಕ್ಷಕಿಗೆ ಚುಂಬಿಸಿದ ಪ್ರಿಯಕರ -ವಿಡಿಯೋ ವೈರಲ್
ಮಕ್ಕಳಿಗೆ ಅಕ್ಷರ ಜ್ಞಾನ ನೀಡಿ, ನೈತಿಕತೆ ಪಾಠ ಮಾಡಬೇಕಿದ್ದ ಶಾಲೆಯಲ್ಲಿ ಶಿಕ್ಷಕಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ. ತನ್ನ ಪ್ರಿಯಕರನೊಬ್ಬನೊಂದಿಗೆ ಬಹಿರಂಗವಾಗಿ ರೊಮ್ಯಾನ್ಸ್ ಮಾಡುವ ವಿಡಿಯೋ ವೈರಲ್ ಆಗಿದೆ.
ತಾಲೂಕಿನ ಕೋಹಿನೂರ ಹೋಬಳಿ ವ್ಯಾಪ್ತಿಯ ಲಾಡವಂತಿ ಸಮೀಪದ ಗ್ರಾಮವೊಂದರಲ್ಲಿ ಅಂಗನವಾಡಿ ಕೇಂದ್ರದಲ್ಲಿ ಈ ಅನಾಚಾರ ನಡೆದಿದೆ ಎನ್ನಲಾಗ್ತಿದೆ. ಈ ಮಹಿಳೆ ಅದೇ ಗ್ರಾಮದ ವ್ಯಕ್ತಿಯೊಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಹಗಲು ಹೊತ್ತಿನಲ್ಲಿಯೇ ಶಾಲೆಯಲ್ಲಿ ಕುಳಿತು ರೊಮ್ಯಾನ್ಸ್ ಮಾಡ್ತಿದ್ದಳು. ಇದನ್ನು ಅರಿತ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿಯಲು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಾಹ್ನ ಶಾಲೆಗೆ ಬಂದ ವ್ಯಕ್ತಿಯೊಬ್ಬ ಕೆಲಕ್ಷಣ ಶಿಕ್ಷಕಿ ಎನ್ನಲಾದ ಮಹಿಳೆ ಪಕ್ಕದಲ್ಲಿ ಕುಳಿತು ನಂತರ ಬಾಗಿಲಲ್ಲಿ ಬಂದು ಹೊರಗಡೆ ಯಾರೂ ಇಲ್ಲದ್ದನ್ನು ಖಾತರಿ ಪಡಿಸಿಕೊಂಡು ಮಹಿಳೆಗೆ ಎರಡು ಬಾರಿ ಚುಂಬಿಸುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಸಂಬಂಧಿತ ಇಲಾಖೆ ಅಧಿಕಾರಿಗಳು ತಕ್ಷಣ ಜಾಗೃತರಾಗಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.