ಬೀದರ್: ಪ್ರಧಾನಿ ಮೋದಿಯವರನ್ನು ಕಂಡರೆ ನಾವು ಭಯಬೀಳಲ್ಲ. ಅವರನ್ನು ಕಂಡರೆ ಭ್ರಷ್ಟಾಚಾರಿಗಳು, ದೇಶದ್ರೋಹಿಗಳು, ಮತ ಬ್ಯಾಂಕ್ ಮೇಲೆ ರಾಜಕಾರಣ ಮಾಡೋರು ಮಾತ್ರ ಭಯಪಡುತ್ತಾರೆ ಎಂದು ಸಂಸದ ಭಗವಂತ ಖೂಬಾ ತಿರುಗೇಟು ನೀಡಿದರು.
ಪ್ರಧಾನಿ ಮೋದಿ ಕಂಡರೆ ಭ್ರಷ್ಟಾಚಾರಿಗಳು ಮಾತ್ರ ಭಯಪಡಬೇಕು, ನಾವಲ್ಲ: ಸಂಸದ ಖೂಬಾ - ಸಂಸದ ಭಗವಂತ ಖೂಬಾ
ಸಿಎಂ ಬಿ.ಎಸ್. ಯಡಿಯೂರಪ್ಪ ಆದಿಯಾಗಿ ರಾಜ್ಯದ 25 ಸಂಸದರು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹೋಗಿ ನೆರೆ ಪರಿಹಾರ ಕೇಳಲು ಹೆದರುತ್ತಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪವನ್ನು ಸಂಸದ ಭಗವಂತ ಖೂಬಾ ತಳ್ಳಿ ಹಾಕಿದರು.
ನಗರದ ರಂಗಮಂದಿರದಲ್ಲಿ ಬಿದರಿ ಸಾಂಸ್ಕೃತಿಕ ವೇದಿಕೆ ಲೋಕಾರ್ಪಣೆ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್ನವರ ಪ್ರಶ್ನೆಗಳಿಗೆಲ್ಲ ಉತ್ತರಿಸುವ ಅಗತ್ಯವಿಲ್ಲ. ನೆರೆ ಪೀಡಿತ ಪ್ರದೇಶದ ಸಮಗ್ರ ಅಭಿವೃದ್ಧಿ ಮಾಡಲು ನಾವು ಸಿದ್ಧ ಎಂದು ಹೇಳಿದರು.
ಭೀಕರ ಜಲಪ್ರಳಯಕ್ಕೆ ತುತ್ತಾಗಿ ಬದುಕು ಬೀದಿಪಾಲಾಗಿರುವ ಸಂತ್ರಸ್ತರ ಸಹಾಯಕ್ಕೆ ಕೇಂದ್ರ ಸರ್ಕಾರ ನಿಯಮಾವಳಿ ಪ್ರಕಾರ ಅನುದಾನ ಬಿಡುಗಡೆ ಮಾಡಲಿದೆ. ಎನ್ಡಿಆರ್ಎಫ್ ನಿಯಮಾವಳಿ ಹಾಗೂ ಕ್ರೀಯಾ ಯೋಜನೆಯಂತೆ ಕೇಂದ್ರ ಸರ್ಕಾರವು ನೆರೆ ಪೀಡಿತ ಪ್ರದೇಶದಲ್ಲಿನ ಹಾನಿ ಹಾಗೂ ಪುನರ್ವಸತಿಗಾಗಿ ಪರಿಹಾರ ನೀಡಲಿದೆ ಎಂದರು.