ಬೀದರ್ :ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟಕ್ಕೆ ಬರುವ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ಮುಖ್ಯಶಿಕ್ಷಕ ಮಡಯ್ಯ ಸ್ವಾಮಿ ಮತ್ತು ಶಿಕ್ಷಕ ಶಾಂತಕುಮಾರ್ ಇಬ್ಬರು ಶಾಲೆಯ ಎದುರುಗಡೆ ಜಗಳವಾಡಿ ಕೈ-ಕೈ ಮಿಲಾಯಿಸಿದ ಘಟನೆ ಬೀದರ್ ಜಿಲ್ಲೆಯ ಮಾರ್ಜಾಪುರ ಎಮ್ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಬಿಸಿ ಊಟದ ಹಣಕ್ಕಾಗಿ ಬೀದಿ ಜಗಳವಾಡಿದ ಸರ್ಕಾರಿ ಶಾಲಾ ಶಿಕ್ಷಕರು
ಶಿಕ್ಷಕರ ಬೀದಿ ಜಗಳ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಮರ್ಜಾಪುರ ಎಮ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಡಯ್ಯ ಸ್ವಾಮಿ ಮತ್ತು ಶಾಂತಕುಮಾರ್ ಮಧ್ಯೆ ಗಲಾಟೆ ನಡೆದಿದ್ದು, ಗ್ರಾಮಸ್ಥರು ಶಾಂತಪಡಿಸಲು ಯತ್ನಿಸಿದರು..
ಬಿಸಿಯೂಟದ ಹಣಕ್ಕಾಗಿ ಶಿಕ್ಷಕರಿಬ್ಬರು ಕಿತ್ತಾಡಿದರು.
ಶಿಕ್ಷಕರ ಬೀದಿ ಜಗಳ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಮರ್ಜಾಪುರ ಎಮ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಡಯ್ಯ ಸ್ವಾಮಿ ಮತ್ತು ಶಾಂತಕುಮಾರ್ ಮಧ್ಯೆ ಗಲಾಟೆ ನಡೆದಿದ್ದು, ಗ್ರಾಮಸ್ಥರು ಶಾಂತಪಡಿಸಲು ಯತ್ನಿಸಿದರು.