ಕರ್ನಾಟಕ

karnataka

ETV Bharat / state

ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ, 160 ಕೆ.ಜಿ ಗಾಂಜಾ ಜಪ್ತಿ

ಅಂತಾರಾಜ್ಯ ಗಾಂಜಾ ಸಾಗಾಟಗಾರರನ್ನು ಬೀದರ್ ಪೊಲೀಸರು ಬಂಧಿಸಿ, 160 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.

ಗಾಂಜಾ ಜಪ್ತಿ
ಗಾಂಜಾ ಜಪ್ತಿ

By

Published : Feb 17, 2020, 10:35 PM IST

ಬೀದರ್: ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ಅಂತಾರಾಜ್ಯ ಗಾಂಜಾ ಸಾಗಾಟಗಾರರ ಹೆಡೆಮುರಿ ಕಟ್ಟುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದು, 160 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದ ಉಸ್ಮಾನಾಬಾದ್ ಮೂಲದ ಗಯಾಶೇಖ್ ಹಾಗೂ ಸಲ್ಮಾನ್ ಶೇಖ್ ಬಂಧಿತ ಆರೋಪಿಗಳು. ಜಿಲ್ಲೆಯ ಹುಮನಾಬಾದ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 65ರ ನೈಸ್ ದಾಬಾ ಬಳಿ, ಸಫಾರಿ ಕಾರಿನಲ್ಲಿ ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. 16 ಲಕ್ಷ ರೂ.ಗಳಷ್ಟು ಗಾಂಜಾ, 8 ಲಕ್ಷದ ಸಫಾರಿ ಕಾರನ್ನು ಜಪ್ತಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್, ಡಿವೈಎಸ್​ಪಿ ಮಹೇಶ್ವರಪ್ಪ, ಸಿಪಿಐ ನ್ಯಾಮೆಗೌಡರ ಹಾಗೂ ಪಿಎಸ್​ಐಗಳಾದ ಮಹಾಂತೇಶ್, ರವಿಕುಮಾರ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details