ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ಪಟ್ಟಣಕ್ಕಿಂದು ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರಪಾಂಡೆ ಭೇಟಿ ನೀಡಿದ್ದಾರೆ.
ಗಣೇಶಮೂರ್ತಿ ನಿಮಜ್ಜನ ಹಿನ್ನೆಲೆ: ಸಿರುಗುಪ್ಪ ಪಟ್ಟಣಕ್ಕಿಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ಭೇಟಿ - Police chief visits to Siruguppa
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣಕ್ಕಿಂದು ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರಪಾಂಡೆ ಭೇಟಿ ನೀಡಿ ಗಣೇಶ ಮಿತ್ರ ಮಂಡಳಿ ಸದಸ್ಯರೊಂದಿಗೆ ಚರ್ಚಿಸಿದ್ದಾರೆ.
ಹಿಂದೂ ಮಹಾಸಭಾ ಗಣೇಶ ಮಿತ್ರಮಂಡಳಿಯಿಂದ ಪ್ರತಿಷ್ಠಾಪಿಸಲಾದ ಗಣೇಶಮೂರ್ತಿ ನಿಮಜ್ಜನಕ್ಕೆ ಸಿರುಗುಪ್ಪ ತಾಲೂಕಿನ ದೇಶನೂರು ಗ್ರಾಮ ಮಾರ್ಗದಲ್ಲೇ ಗಣೇಶ ಮೂರ್ತಿಗಳ ಮೆರವಣಿಗೆ ಕೊಂಡೊಯ್ಯುಲು ಅವಕಾಶ ಕಲ್ಪಿಸಿಕೊಡಬೇಕೆಂಬ ಮನವಿ ಮಾಡಿದ್ದರು. ಈ ಮನವಿ ಮೇರೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರ ಪಾಂಡೆ ಭೇಟಿ ನೀಡಿ, ಗಣೇಶ ಮಿತ್ರಮಂಡಳಿ ಸದಸ್ಯರೊಂದಿಗೆ ಚರ್ಚಿಸಿದ್ದಾರೆ. ಅವರೊಂದಿಗೆ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್ಪಿ ಅರುಣ ಕುಮಾರ್ ಸಹ ಭಾಗಿಯಾಗಿದ್ದರು.
ಪೊಲೀಸರು ಹಿಂದೂ ಮಹಾಸಭಾದ ಗಣೇಶ ಮಿತ್ರ ಮಂಡಳಿ ಸದಸ್ಯರು ಹಾಗೂ ದೇಶನೂರು ಗ್ರಾಮಸ್ಥರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗಣೇಶಮೂರ್ತಿಗಳ ಮೆರವಣಿಗೆ ಮಾರ್ಗ ಬದಲಾವಣೆಯಿಲ್ಲ ಎಂಬ ಸ್ಪಷ್ಟನೆಯನ್ನು ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯು ನೀಡಿದೆ. ಹಾಗಾಗಿ ಈ ದಿನ ನಡೆದ ಸಭೆಯಲ್ಲಿ ಮಾರ್ಗ ಬದಲಾವಣೆ ಕುರಿತು ಯಾವುದೇ ಚರ್ಚೆಗೆ ಆಸ್ಪದ ನೀಡೋದು ಅಸಾಧ್ಯ ಎನ್ನುತ್ತಿವೆ ಪೊಲೀಸ್ ಮೂಲಗಳು.