ಕರ್ನಾಟಕ

karnataka

By

Published : Sep 11, 2019, 8:26 PM IST

ETV Bharat / state

ಬೀದರ್ ನಲ್ಲಿ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ: ಪ್ರಧಾನಿ ಮೊದಿ ವಿಡಿಯೋ ಕಾನ್ಫರೆನ್ಸ್

ದೇಶಾದ್ಯಂತ ಜಾರಿಯಾಗಿರುವ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಬೀದರ್ ಹೊರ ವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಗಡಿ ಜಿಲ್ಲೆ ಬೀದರ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಧಾನಿ ಮೊದಿ ವಿಡಿಯೋ ಕಾನ್ಫರೆನ್ಸ್

ಬೀದರ್:ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗಡಿ ಜಿಲ್ಲೆ ಬೀದರ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬೀದರ್ ಹೊರ ವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಶು ಪಾಲನೆ, ಪಶು ವೈದ್ಯಕೀಯ ಸೇವಾ ಇಲಾಖೆ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇರ ಕಾರ್ಯಕ್ರಮದಲ್ಲಿ ದೇಶಾದ್ಯಂತ ಜಾರಿಯಾಗಿರುವ ರಾಷ್ಟ್ರೀಯ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಚಾಲನೆ ನೀಡಿದರು.

ಧಾನಿ ಮೊದಿ ವಿಡಿಯೋ ಕಾನ್ಫರೆನ್ಸ್

ರಾಜ್ಯದ 33 ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ರೈತರನ್ನು ಒಳಗೊಂಡು ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದು ಇದೇ ವೇಳೆಯಲ್ಲಿ ಸಚಿವ ಚವ್ಹಾಣ ಹೇಳಿದರು.

ಪಶು ಇಲಾಖೆ ಆಯುಕ್ತ ಕುಪೇಂದ್ರ, ವಿವಿ ಕುಲಸಚಿವ ನಾರಾಯಣಸ್ವಾಮಿ, ಜಿ.ಪಂ ಸಿಇಓ ಜ್ಞಾನೇಂದ್ರ ಕುಮಾರ್ ಗಂಗಾವರ್, ಉಪ ನಿರ್ದೇಶಕ ಡಾ.ಗೌತಮ ಅರಳಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details