ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿ ಭಾರತ್​ ಬಂದ್​ಗೆ ನೀರಸ ಪ್ರತಿಕ್ರಿಯೆ - ಭಾರತ್ ಬಂದ್ ಇಲ್ಲ

ಬೀದರ್​ನಲ್ಲಿ ಬಸ್​ಗಳು ಪ್ರತಿದಿನದಂತೆ ಓಡಾಡುತ್ತಿದ್ದು, ಜನಜೀವನ ಸಾಮಾನ್ಯವಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ನೀಡಿರುವ ಭಾರತ್ ಬಂದ್​​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

no-bharat-bandh-in-bidar-today
no-bharat-bandh-in-bidar-today

By

Published : Jan 8, 2020, 10:36 AM IST

ಬೀದರ್:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ನೀಡಿರುವ ಭಾರತ್ ಬಂದ್​​ಗೆ ಗಡಿ ಜಿಲ್ಲೆ ಬೀದರ್​ನಲ್ಲಿ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ.

ಬೀದರ್​ನಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ

ನಗರದ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯಾದ್ಯಂತ ಬಸ್ ಡಿಪೋಗಳಿಂದ ಸಂಸ್ಥೆಯ ಬಸ್​ಗಳ ಓಡಾಟ ಸಾಮಾನ್ಯವಾಗಿದೆ. ಒಟ್ಟು 562 ಬಸ್​ಗಳು ರಸ್ತೆಗಿಳಿದಿದ್ದು, ಸಂಚಾರದ ಮೇಲೆ ಬಂದ್ ಪರಿಣಾಮ ಬೀರಿಲ್ಲ. ಎಂದಿನಂತೆ ಜನಜೀವನ ನಡೆಯುತ್ತಿದ್ದು, ಶಾಲಾ-ಕಾಲೇಜುಗಳಿಗೆ ರಜೆ ನೀಡಿಲ್ಲ.

ಜಿಲ್ಲಾಧಿಕಾರಿಗಳ ಕಚೇರಿ ಎದುರಲ್ಲಿ ಮಧ್ಯಾಹ್ನದ ವೇಳೆಗೆ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ನೀಡಲಿವೆ ಎನ್ನಲಾಗಿದ್ದು, ಸದ್ಯ ಬಂದ್​ಗೆ ನೀರಸ ಪ್ರತಿಕ್ರೀಯೆ ವ್ಯಕ್ತವಾಗಿದೆ.

ABOUT THE AUTHOR

...view details