ಕರ್ನಾಟಕ

karnataka

ಮಹಿಳೆ ಬಲಿ ಪಡೆದ ಕೊರೊನಾ: ಗ್ರಾಮೀಣ ಭಾಗದಲ್ಲಿ ಅಟ್ಟಹಾಸ ಮುಂದುವರೆಸಿದ ಡೆಡ್ಲಿ ವೈರಸ್​

By

Published : Aug 4, 2020, 11:11 PM IST

ಜ್ವರ, ಉಸಿರಾಟ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತಿದ್ದ ಮಹಿಳೆಯೊಬ್ಬಳು ಕೊರೊನಾಗೆ ಬಲಿಯಾದ ಘಟನೆ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ. ಇನ್ನು ಇಂದು ಮತ್ತೆ 13 ಜನರಲ್ಲಿ ಸೋಂಕು ಧೃಡಪಟ್ಟಿದೆ.

New corona positive case confirmed in Basavakalyan
ಸಾಂದರ್ಭಿಕ ಚಿತ್ರ

ಬಸವಕಲ್ಯಾಣ: ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಾರಕ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಮಂಗಳವಾರ ಮತ್ತೆ ೧೩ ಜನರಲ್ಲಿ ಸೋಂಕು ಧೃಡಪಟ್ಟಿದೆ. ಇನ್ನು ಕಿಲ್ಲರ್​ ಕೊರೊನಾಗೆ ಓರ್ವ ಮಹಿಳೆ ಮೃತಪಟ್ಟ ವರದಿ ಸಹ ಆಗಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕು ಪೀಡಿತರ ಸಂಖ್ಯೆ 469ಕ್ಕೆ ತಲುಪಿದೆ.

ಶಿವನಗರ ಬಡಾವಣೆಯ 14 ವರ್ಷ ಹಾಗೂ ೩ ವರ್ಷದ ಬಾಲಕಿಯರು, ಹುಲಸೂರ ಪಟ್ಟಣದ 55 ಹಾಗೂ 37 ವರ್ಷದ ಪುರುಷ, 25 ವರ್ಷದ ಮಹಿಳೆ, ಮುಚಳಂಬ ಗ್ರಾಮದ ೫೫ ವರ್ಷದ ಪುರುಷ, ಮುಡಬಿ ಪೊಲೀಸ್ ಠಾಣೆಯ 43 ಹಾಗೂ 40 ವರ್ಷದ ಇಬ್ಬರು ಪುರುಷ ಕಾನ್ಸ್​ಟೇಬಲ್​, 60, 35, 30 ವರ್ಷದ ಮಹಿಳೆ, 16 ವರ್ಷದ ಬಾಲಕ, 35 ವರ್ಷದ ಪುರುಷ, ಇನ್ನು ನಗರದ 40 ವರ್ಷದ ಪುರುಷನಲ್ಲಿ ಸೋಂಕು ಧೃಡಪಟ್ಟಿದೆ.

ಬಲಿ:ತಾಲೂಕಿನ ಹತ್ಯಾಳ ಗ್ರಾಮದ ೫೫ ವರ್ಷದ ಮಹಿಳೆ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾಳೆ ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತ ಪಡಿಸಿವೆ. ಜ್ವರ, ಉಸಿರಾಟ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತಿದ್ದ ಇವರು ಚಿಕಿತ್ಸೆ ಫಲಿಸದೆ ಆ.2ರಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details