ಕರ್ನಾಟಕ

karnataka

ETV Bharat / state

ಬೆಳೆ ನಷ್ಟ: ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯ

ಕೊರೊನಾ ಮಹಾಮಾರಿ ಮಧ್ಯದಲ್ಲೇ ರೈತರು ಮುಂಗಾರು ಬಿತ್ತನೆ ಮಾಡಿದ್ದರು. ಒಂದು ಹಂತದಲ್ಲಿ ಉತ್ತಮ ಬೆಳೆ ಬಂದಿತ್ತಾದರೂ ರಾಶಿ ಸಮಯದಲ್ಲೇ ಮಳೆ ಬಂದಿದ್ದು, ಬೆಳೆಗಳು ಹಾಳಾಗಿ ಹೋಗಿವೆ.

MLA Bundeppa Kashempur demands crop relief solution
ಬೆಳೆ ನಷ್ಟ: ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯ

By

Published : Sep 15, 2020, 9:18 AM IST

Updated : Sep 15, 2020, 9:38 AM IST

ಬೀದರ್:ಸತತ ಮಳೆಯಿಂದಾಗಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪ್ರತೀ ಎಕರೆಗೆ 25 ಸಾವಿರ ರೂ.ಗಳಂತೆ ಬೆಳೆ ನಷ್ಟ ಸಂಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ, ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.

ಬೆಳೆ ನಷ್ಟ: ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯ

ಬೀದರ್ ತಾಲೂಕಿನ ಮರ್ಜಾಪೂರ (ಎಂ) ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೊರೊನಾ ಮಹಾಮಾರಿ ಮಧ್ಯದಲ್ಲೇ ರೈತರು ಮುಂಗಾರು ಬಿತ್ತನೆ ಮಾಡಿದ್ದರು. ಒಂದು ಹಂತದಲ್ಲಿ ಉತ್ತಮ ಬೆಳೆ ಬಂದಿತ್ತಾದರು ರಾಶಿ ಸಮಯದಲ್ಲೇ ಮಳೆ ಬಂದಿದ್ದು, ಬೆಳೆಗಳು ಹಾಳಾಗಿ ಹೋಗಿವೆ. ಬಿತ್ತನೆ ಮಾಡಿದ್ದ ಹೆಸರು, ಉದ್ದು ಸೇರಿದಂತೆ ಅನೇಕ ಬೆಳೆಗಳು ನೆಲಸಮವಾಗಿವೆ.

ಜಿಲ್ಲೆಯಲ್ಲಿ 28,345 ಹೆಕ್ಟೇರ್​​ ಹೆಸರು, 25000 ಹೆಕ್ಟರ್ ಉದ್ದು ಬಿತ್ತನೆ ಮಾಡಲಾಗಿದ್ದು, ಬಹುತೇಕ ರೈತರು ಮಳೆಯಿಂದಾಗಿ ಬೆಳೆ ಕಳೆದುಕೊಂಡಿದ್ದಾರೆ. ಬೆಳೆ ಕಳೆದುಕೊಂಡ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ನೀಡಬೇಕು. ಕೂಡಲೇ ಸರ್ಕಾರ ರೈತರ ನೆರವಿಗೆ ಮುಂದಾಗಬೇಕು. ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

Last Updated : Sep 15, 2020, 9:38 AM IST

ABOUT THE AUTHOR

...view details