ಕರ್ನಾಟಕ

karnataka

ETV Bharat / state

10 ದಿನ ಹೋಂ ಕ್ವಾರಂಟೈನ್​ ಇರಲಿದ್ದಾರೆ ಸಚಿವ ಪ್ರಭು ಚವ್ಹಾಣ

ಬೀದರ್ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು 10 ದಿನಗಳ ಕಾಲ ಹೋಂ ಕ್ವಾರಂಟೈನ್​ ಆಗಿದ್ದು, ಸ್ವಗ್ರಾಮ ಬೊಂತಿ ಘಮಸುಬಾಯಿ ತಾಂಡದ ಮನೆಯಲ್ಲೆ ಎಕಾಂಗಿಯಾಗಿರಲಿದ್ದಾರೆ.

minister-prabhu-chauhan-in-10-days-home-quarantine
ಸಚಿವ ಪ್ರಭು ಚವ್ಹಾಣ

By

Published : Jul 18, 2020, 2:49 AM IST

ಬೀದರ್:ಪಶು ಸಂಗೋಪನಾ, ಬೀದರ್ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು 10 ದಿನಗಳ ಕಾಲ ಹೋಂ ಕ್ವಾರಂಟೈನ್​ ಆಗಿದ್ದು, ಸ್ವಗ್ರಾಮ ಬೊಂತಿ ಘಮಸುಬಾಯಿ ತಾಂಡದ ಮನೆಯಲ್ಲೆ ಎಕಾಂಗಿಯಾಗಿರಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಕಟ್ಟೆ ತಿಳಿಸಿದ್ದಾರೆ.

ಕೊರೊನಾ ವೈರಸ್ ಅಟ್ಟಹಾಸ ಹೆಚ್ಚಾಗಿದ್ದು ಈ ವೇಳೆ ಸಚಿವ ಪ್ರಭು ಚವ್ಹಾಣ ಅವರು ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಜಿಲ್ಲೆಯಾದ್ಯಂತ ಪ್ರಯಾಣ ಮಾಡಿ, ಸಭೆ, ಸಮಾರಂಭ ಹಾಗೂ ಸಾರ್ವಜನಿಕರ ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವೈಧ್ಯರ ಸಲಹೆ ಮೇರೆಗೆ ಹೊಂ ಕ್ವಾರಂಟೈನ್ ಆಗಿದ್ದಾರೆ. ಈ ವೇಳೆಯಲ್ಲಿ ಸಾರ್ವಜನಿಕರ ಭೇಟಿ ನಿರ್ಬಂಧಿಸಲಾಗಿದ್ದು ಸಚಿವರ ತುರ್ತು ಸೇವೆಗಳಿಗಾಗಿ ಆಪ್ತ ಸಹಾಯಕರನ್ನು ಸಂಪರ್ಕಿಸಬಹುದು ಎಂದು ಕರ್ತವ್ಯಾಧಿಕಾರಿ ಶಿವಕುಮಾರ್ ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಕ್​ಡೌನ್ ಅನುಷ್ಠಾನಕ್ಕೆ ಸಚಿವರ ಸೂಚನೆ:

ಕೊರೊನಾ ಸೋಂಕು ಹರಡುವಿಕೆಗೆ ಬ್ರೇಕ್ ಹಾಕಲು ಒಂದು ವಾರಗಳ ಕಾಲ ಬೀದರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಜಾರಿಗೆ ತರಲಾದ ಲಾಕ್​ಡೌನ್ ಪರಿಣಾಮಕಾರಿ ಅನುಷ್ಢಾನಗೊಳಿಸುವಂತೆ ಎರಡು ಜಿಲ್ಲೆಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್, ಯಾದಗಿರಿ ಜಿಲ್ಲಾಧಿಕಾರಿ ಕುರ್ಮಾರಾವ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಅವರಿಗೆ ಲಾಕ್​ಡೌನ್ ಪರಿಣಾಮಕಾರಿ ಜಾರಿಗೆ ಸೂಚನೆ ನೀಡಿದ್ದಾರೆ ಎಂದು ಕಟ್ಟೆ ತಿಳಿಸಿದ್ದಾರೆ.

ABOUT THE AUTHOR

...view details