ಕರ್ನಾಟಕ

karnataka

ETV Bharat / state

ಕೋವಿಡ್-19 ಪರಿಹಾರ ನಿಧಿಗೆ 3 ತಿಂಗಳ ವೇತನ ನೀಡಿದ ಸಚಿವ ಪ್ರಭು ಚವ್ಹಾಣ್​ - ಕೊವಿಡ್-19 ಪರಿಹಾರ ನಿಧಿ

ಕೋವಿಡ್-19 ಪರಿಹಾರ ನಿಧಿಗೆ 3 ತಿಂಗಳ ವೇತನ ನೀಡಿರುವ ಸಚಿವ ಪ್ರಭು ಚವ್ಹಾಣ್, ಚೆಕ್​ ​ಅನ್ನು ಸಿಎಂ ಯಡಿಯೂರಪ್ಪನವರಿಗೆ ಹಸ್ತಾಂತರಿಸಿದರು.

ಕೋವಿಡ್-19 ಪರಿಹಾರ ನಿಧಿಗೆ 3 ತಿಂಗಳ ವೇತನ ನೀಡಿದ ಸಚಿವ ಪ್ರಭು ಚವ್ಹಾಣ್​
ಕೋವಿಡ್-19 ಪರಿಹಾರ ನಿಧಿಗೆ 3 ತಿಂಗಳ ವೇತನ ನೀಡಿದ ಸಚಿವ ಪ್ರಭು ಚವ್ಹಾಣ್​

By

Published : May 22, 2020, 11:58 PM IST

ಬೀದರ್: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ತಮ್ಮ 3 ತಿಂಗಳ ವೇತನವನ್ನು ಕೋವಿಡ್-19 ಪರಿಹಾರ ನಿಧಿಗೆ ನೀಡಿದ್ದಾರೆ.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ, ತಮ್ಮ ವೇತನದ 4,22,730 ರೂ. ಚೆಕ್‌ನ್ನ ಹಸ್ತಾಂತರಿಸಿದರು. ಇದೇ ವೇಳೆ ಬೀದರ್ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಎಲ್ಲ ಸಿಬ್ಬಂದಿಯ ಒಂದು ದಿನದ ಸಂಬಳದ 23,46,340 ರೂ. ಚೆಕ್‌ನ್ನು ಕೂಡ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ನೀಡಿದರು.

ಸಿಬ್ಬಂದಿಗೆ ಅಭಿನಂದನೆ:

ಜನತೆಗೆ ಸಹಾಯವಾಗಲೆಂದು ಒಂದು ದಿನದ ಸಂಬಳವನ್ನು ನೀಡಿದ ಬೀದರ್ ಪಶು ವೈದ್ಯಕೀಯ ವಿವಿಯ ಎಲ್ಲ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

ಕಷ್ಟದಲ್ಲಿದ್ದವರಿಗೆ ಸಹಾಯ:

ಕೋವಿಡ್-19 ಸಂಕಷ್ಟದಿಂದ ನಮ್ಮ ಭಾರತ ನಲುಗಿ ಹೋಗಿದೆ. ದೇಶ ಹಾಗೂ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರ್ಥಿಕವಾಗಿಯೂ ಲಾಕ್‌ಡೌನ್ ನಿಂದ ಹೊಡೆತ ಬಿದ್ದಿದೆ. ನನ್ನ ಮತಕ್ಷೇತ್ರದಲ್ಲಿ ಕಷ್ಟದಲ್ಲಿದ್ದವರಿಗೆ ಆಹಾರದ ವ್ಯವಸ್ಥೆಯನ್ನು ಮಾಡಿ ಸಹಾಯ ಮಾಡಿದ್ದಾಗಿ ಸಚಿವರಾದ ಚವ್ಹಾಣ್ ಅವರು ತಿಳಿಸಿದ್ದಾರೆ.

ABOUT THE AUTHOR

...view details