ಬೀದರ್: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನ ಭಾಲ್ಕಿ ಡಿವೈಎಸ್ಪಿ ದೇವರಾಜ್ ಬಿ. ನೇತೃತ್ವದ ತಂಡ ಬಂಧಿಸಿದ್ದು, ಇನ್ನಿಬ್ಬರು ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಅಕ್ರಮ ಗಾಂಜಾ ಸಾಗಾಟ..ಓರ್ವನ ಬಂಧನ, ಇನ್ನಿಬ್ಬರು ಪರಾರಿ - bidar news
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸೊರಳ್ಳಿ ಗ್ರಾಮದ ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನ ಭಾಲ್ಕಿ ಡಿವೈಎಸ್ಪಿ ದೇವರಾಜ್ ಬಿ. ನೇತೃತ್ವದ ತಂಡ ಬಂಧಿಸಿದ್ದು, ಇನ್ನಿಬ್ಬರು ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಅಕ್ರಮ ಗಾಂಜಾ ಸಾಗಾಟ..ಓರ್ವನ ಬಂಧನ, ಇನ್ನಿಬ್ಬರು ಪರಾರಿ
ಜಿಲ್ಲೆಯ ಔರಾದ್ ತಾಲೂಕಿನ ಸೊರಳ್ಳಿ ಗ್ರಾಮದ ಬಳಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ ಡಿವೈಎಸ್ಪಿ ದೇವರಾಜ್ ಬಿ. ತಂಡ ಓರ್ವ ಆರೋಪಿಯನ್ನ ಬಂಧಿಸಿದೆ. ಇನ್ನಿಬ್ಬರು ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ್ದು, ಈ ವೇಳೆ ಡಿವೈಎಸ್ಪಿ ಆತ್ಮ ರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ಬಂಧಿತನಿಂದ 3.42 ಲಕ್ಷ ರೂಪಾಯಿ ಮೌಲ್ಯದ 31 ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು, ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.