ಬಸವಕಲ್ಯಾಣ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಶಾರದಾ ಕಲ್ಮಾಲಕರ ಅವರ ಅಮಾನತು ಆದೇಶವನ್ನು ಹಿಂಪಡೆಬೇಕು ಎಂದು ಮಾದಿಗ ದಂಡೋರಾ ಹೋರಾಟ ಸಮಿತಿ ಒತ್ತಾಯಿಸಿದೆ.
ಸಮಿತಿ ಪದಾಧಿಕಾರಿಗಳ ನಿಯೋಗ ಇಲ್ಲಿನ ಮಿನಿ ವಿಧಾನಸೌಧಕ್ಕೆ ತೆರಳಿ ಬೇಡಿಕೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಿ ಮನವಿ ಈಡೇರಿಕೆಗೆ ಕೋರಿದರು.
ಸಿಡಿಪಿಒ ಶಾರದಾ ಕಲ್ಮಾಲಕ ಅವರನ್ನು ಅಮಾನತುಗೊಳಿಸಿರುವುದನ್ನು ನಮ್ಮ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ. ಶಾರದಾ ಕಲ್ಮಾಲಕ ಅವರು ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿಯಾಗಿದ್ದಾರೆ. ಇವರ ಪ್ರಮಾಣಿಕತೆಯನ್ನು ಸಹಿಸದ ಕೆಲವರ ಕುತಂತ್ರದಿಂದ ಹಾಗೂ ರಾಜಕೀಯ ಕೈವಾಡದಿಂದಾಗಿ ಮೇಲಾಧಿಕಾರಿಗಳು ಕುರುಡುತನ ಪ್ರದರ್ಶಿಸಿ, ಅಮಾನತು ಮಾಡಿರುವುದನ್ನು ಸಮಿತಿ ಸಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಪ್ರಮಾಣಿಕ ಅಧಿಕಾರಿಯನ್ನು ಪುನಃ ನೇಮಕ ಮಾಡಬೇಕು. ಒಂದು ವೇಳೆ ನೇಮಕ ಮಾಡದಿದ್ದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.