ಕರ್ನಾಟಕ

karnataka

ETV Bharat / state

ಲೋಕಾಯುಕ್ತ ಬಲೆಗೆ ಬಿದ್ದ ಭೂ ಅಧೀಕ್ಷಕ: ರೈತನಿಂದ ಲಂಚ ಪಡೆಯುತ್ತಿದ್ದ ಚಿತ್ತಣ್ಣ ಪಾಟೀಲ - Lokayukth Ride

ಜಮೀನು ಸರ್ವೇಗಾಗಿ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ಅಧೀಕ್ಷಕ- ರೈತನಿಂದ 5 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ- ಭೂ ಅಧೀಕ್ಷಕ ಚಿತ್ತಣ್ಣ ಪಾಟೀಲ್​ ಬಂಧಿಸಿದ ಲೋಕಾಯುಕ್ತ ಪೊಲೀಸರು

Lokayukth Ride
ಲೋಕಾಯುಕ್ತ ದಾಳಿ

By

Published : Dec 26, 2022, 2:28 PM IST

ಲೋಕಾಯುಕ್ತ ದಾಳಿ

ಬೀದರ್:ರೈತರಿಂದ 5 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಭೂ ಅಧೀಕ್ಷಕ ಚಿತ್ತಣ್ಣ ಪಾಟೀಲ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.

ಆರೋಪಿಯು ತಾಲೂಕಿನ ಲಖನಗಾಂವ್​ ಗ್ರಾಮದ ರೈತ ಸಂಜೀವಕುಮಾರ ಚಂದ್ರಕಾಂತ ಅವರಿಂದ ಜಮೀನು ಸರ್ವೇ ಸಂಬಂಧ ಪಟ್ಟಣದ ಹೊರವಲಯದ ಡಾಬಾವೊಂದರಲ್ಲಿ ಸುಮಾರು 40 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ನಂತರ 15 ಸಾವಿರ ರೂಪಾಯಿ ಲಂಚಕ್ಕೆ ಒಪ್ಪಿದ್ದರು ಎನ್ನಲಾಗ್ತಿದೆ. ಆ 15 ಸಾವಿರದಲ್ಲಿ ಭಾನುವಾರ ಮುಂಗಡವಾಗಿ 5 ಸಾವಿರ ರೂ. ನಗದನ್ನು ಲಂಚವಾಗಿ ರೈತನಿಂದ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ನೀಲಪ್ಪ ಓಲೇಕಾರ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಚಿತ್ತಣ್ಣ ಅವರನ್ನು ಬಂಧಿಸಿದೆ.

ಇದನ್ನೂ ಓದಿ:ಮೈಸೂರಿನಲ್ಲಿ ಲೋಕಾಯುಕ್ತ ದಾಳಿ: ಮುಡಾ ತಹಶೀಲ್ದಾರ್ ಸೇರಿ ಮೂವರು ವಶಕ್ಕೆ

ABOUT THE AUTHOR

...view details