ಕರ್ನಾಟಕ

karnataka

ETV Bharat / state

ಬೀದರ್ ಬ್ರಿಮ್ಸ್​ನಲ್ಲಿ ಕೈಕೊಟ್ಟ ಲಿಫ್ಟ್: ರೋಗಿಗಳ ಪರದಾಟ - ಬೀದರ್ ಬ್ರಿಮ್ಸ್​ ಆಸ್ಪತ್ರೆ

ಬೀದರ್​ನ ಬ್ರಿಮ್ಸ್​ನಲ್ಲಿ ಲಿಫ್ಟ್​ ಮತ್ತೆ, ಮತ್ತೆ ಕೈಕೊಡುತ್ತಿದೆ. ಇದರಿಂದ ರೋಗಿಗಳು, ಸಿಬ್ಬಂದಿ ಪರದಾಡುವಂತಾಗಿದೆ.

ಲಿಫ್ಟ್​ ಸ್ಥಗಿತಗೊಂಡಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.

By

Published : Oct 16, 2019, 3:25 PM IST

ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದ ಲಿಫ್ಟ್ ಕೆಟ್ಟು ಹೊಗಿ ರೋಗಿಗಳು ಪರದಾಡುವಂತಾಗಿದ್ದು ಹಾಲು ಬ್ರೇಡ್ ಸಪ್ಲೈಗೂ ಬ್ರೇಕ್ ಬಿದ್ದಿದೆ.

ಬೆಳಿಗ್ಗೆ 8 ಗಂಟೆಯಿಂದ ಆಸ್ಪತ್ರೆಯ ಎಲ್ಲಾ 8 ಲಿಫ್ಟ್​ಗಳು ಏಕಕಾಲಕ್ಕೆ ಕೆಲಸ ಮಾಡುವುದನ್ನು ನಿಲ್ಲಿಸಿವೆ. ಇದರಿಂದಾಗಿ ನೆಲ ಮಹಡಿಯಿಂದ ಮೇಲೆ ಹೋಗಲು ರೋಗಿಗಳು ಸಾಹಸ ಪಡುವಂತಾಗಿದೆ.

ಲಿಫ್ಟ್​ ಸ್ಥಗಿತಗೊಂಡಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.

ಬಾಣಂತಿಯರು ಪುಟ್ಟ ಕಂದಮ್ಮಗಳನ್ನು ತಗೆದುಕೊಂಡು ಅಲೆದಾಡಿದರೆ, ಸಿಬ್ಬಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಷ್ಟೇಲ್ಲಾ ಅವಾಂತರ ನಡೆದ್ರು ಬ್ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ತಲೆ ಕೆಡಿಸಿಕೊಂಡಿಲ್ಲ.

ಕಳೆದ ತಿಂಗಳಷ್ಟೇ ಲಿಫ್ಟ್​ನಲ್ಲಿ ಸಿಲುಕಿ ರೋಗಿಗಳು ಪರದಾಡಿದ್ದರು. ಇದೀಗ ಮತ್ತೆ ಲಿಫ್ಟ್ ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಎಂದು ರೋಗಿಗಳು ಆಕ್ರೋಶ ಹೊರ ಹಾಕಿದ್ದಾರೆ.

ABOUT THE AUTHOR

...view details