ಬೀದರ್: ಇಲ್ಲಿನ ವಾಯು ನೆಲೆಯಲ್ಲಿ ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ ಆಚರಿಸಲಾಯಿತು. ಈ ವೇಳೆ ಸೂರ್ಯ ಕಿರಣ ತಂಡದಿಂದ ವೈಮಾನಿಕ ಪ್ರದರ್ಶನ ನಡೆಯಿತು.
ಬಾನಂಗಳಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಜನ ಮನ ಸೋತರು. ಸೂರ್ಯ ಕಿರಣ ವಿಮಾನಗಳ ತಂಡ ವೈಮಾನಿಕ ಪ್ರದರ್ಶನದ ಮೂಲಕ ಗಮನ ಸೆಳೆಯಿತು.

ಕಾರ್ಗಿಲ್ ವಿಜಯೋತ್ಸವಕ್ಕೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಸೂರ್ಯ ಕಿರಣ ಗ್ರೂಪ್ ಕ್ಯಾಪ್ಟನ್ ಪ್ರಶಾಂತ ಗ್ರೂವರ್ ನೇತ್ರತ್ವದಲ್ಲಿ ಆರು ಸೂರ್ಯ ಕಿರಣ ವಿಮಾನಗಳು ಬಾನಂಗಳಕ್ಕೆ ಜಿಗಿದು ಪ್ರದರ್ಶನ ನೀಡುವ ಮೂಲಕ ನೆರೆದ ಪ್ರೇಕ್ಷಕರ ಗಮನ ಸೆಳೆದವು.
ದೂರದ ಚೈನಾ ಮುಂತಾದ ದೇಶಗಳಲ್ಲಿ ಈ ಸೂರ್ಯ ಕಿರಣ ತಂಡ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ. ಹನ್ನೆರಡು ಸೂರ್ಯ ಕಿರಣ ವಿಮಾನಗಳ ತಂಡ ಇಲ್ಲಿದ್ದು, ಸುಖೋಯ್, ಮೀರಾಜ್, ಮಿಗ್ ಯುದ್ಧ ವಿಮಾನಗಳ ಚಾಲನೆ ಮಾಡಿರುವ ಅನುಭವಿ ಪೈಲೆಟ್ಗಳನ್ನ ಸೂರ್ಯ ಕಿರಣ ವಿಮಾನಗಳ ಚಲಾವಣೆ ಮಾಡಲು ನಿಯುಕ್ತಿ ಮಾಡಲಾಗಿದೆ.
ಕ್ಯಾಪ್ಟನ್ ಪ್ರಶಾಂತ ಗ್ರೋವರ್, ಟೀಂ ಲೀಡರ್, ಸ್ಕ್ವಾಡ್ರನ್ ಲಿಡರ್ಗಳಾದ ಟಿ.ದಶರಥಿ, ಸಾಹಿಲ್, ಅಭಿಜಿತ್, ಎಂ.ಮಿಶ್ರಾ, ಎಸ್.ಕಾರ್ತಿಕ್, ಟಿ.ಸಿಂಗ್, ವಿಂಗ್ ಕಮಾಂಡರ್ಗಳಾದ ಎಸ್.ಅರೋರಾ, ವಿ.ಟಿ.ಶೆಲ್ಕೆ, ಎಂ.ನೌಟಿಯಾಲ್, ಅನೂಪ್ ಸಿಂಗ್, ಯು.ಮೆಹ್ತಾ, ಡಿ.ಎ.ನಾಗೇಂದ್ರ, ಫ್ಲೈಟ್ ಲೆಫ್ಟಿನೆಂಟ್ ಸುದರ್ಶನ್ ತಂಡ ವಿಮಾನಗಳನ್ನು ಹಾರಿಸಿ ನೋಡುಗರ ಗಮನ ಸೆಳೆಯಿತು.
TAGGED:
KARGIL VIJAY DIVAS