ಬಸವಕಲ್ಯಾಣ :ತಾಲೂಕಿನಲ್ಲಿ ಕಳೆದ ರಾತ್ರಿ ಭಾರಿ ಮಳೆ ಸುರಿದಿದೆ. ಅಧಿಕ ಮಳೆಯಿಂದ ಮುಸ್ತಾಪೂರ ಬಳಿ ಇರುವ ಚುಳಕಿ ನಾಲಾ ಜಲಾಶಯದ ನೀರಿನ ಗರಿಷ್ಠ ಮಟ್ಟ ತಪುಪಿದೆ. ಇನ್ನು ಒಳಹರಿವು ಹೆಚ್ಚುತ್ತಿರುವುದರಿಂದ ಜಲಾಶಯದ 6 ಗೇಟ್ಗಳ ಮೂಲಕ ನೀರು ಹರಿಬಿಡಿಲಾಗುತ್ತಿದೆ.
ಚುಳಕಿ ನಾಲಾ ಜಲಾಶಯದ ಗರಿಷ್ಠ ಮಟ್ಟ 592 ಮೀ. ಇದ್ದು, 0.938 ಟಿಎಂಸಿ ಸಾಮರ್ಥ್ಯವಿದೆ. ಜಲಾಶಯಕ್ಕೆ 5500 ಕ್ಯೂಸೆಕ್ಸ್ ಒಳಹರಿವು ಇದ್ದು, ಜಲಾಶಯ ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆ ಬುಧವಾರ ಬೆಳಗ್ಗಯಿಂದಲೇ ಒಳಹರಿವು ಹೆಚ್ಚುತಿದ್ದು, ಸಂಜೆ ವೇಳೆಗೆ ಜಲಾಶಯದಿಂದ 10 ಸಾವಿರ ಕ್ಯೂಸೆಕ್ನಷ್ಟು ನೀರು ಹೊರ ಬಿಡಲಾಗುತ್ತಿದೆ. ಮತಷ್ಟು ಹೆಚ್ಚಿನ ಮಳೆಯಾಗುವ ಭೀತಿ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಒಳ ಹರಿವು ಪ್ರಮಾಣಕ್ಕಿಂತ ಹೆಚ್ಚಿನ ನೀರು ಹೊರ ಬಿಡಲಾಗುತ್ತಿದೆ ಎಂದು ರಾಜ್ಯ ನೀರಾವರಿ ನಿಗಮದ ಚುಳಕಿ ನಾಲಾ ಯೋಜನೆ ಭಾಲ್ಕಿ ವಿಭಾಗ -2 ಇಇ ವಿಲಾಸ್ಕುಮಾರ್ ಮಾಶೆಟ್ಟೆ ತಿಳಿಸಿದ್ದಾರೆ.