ಕರ್ನಾಟಕ

karnataka

ETV Bharat / state

ಹೆಚ್​ಡಿಕೆ ಅವರನ್ನ ವೇಶ್ಯೆಗೆ ಹೋಲಿಕೆ ಮಾಡಿದ ಎಸ್​ಟಿ ಸೋಮಶೇಖರ್: ಕುಮಾರಸ್ವಾಮಿ ಕಿಡಿ

ಅವರ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತದೆ - ಸ್ಯಾಂಟ್ರೋ ರವಿಯ ವಿಡಿಯೋ ಎಲ್ಲೆಡೆ ಓಡಾಡುತ್ತಿರುವಾಗ ತನಿಖೆ ಮಾಡಲು ಇವರಿಗೆ ಇನ್ನೇನು ಬೇಕು - ಸಿದ್ದರಾಮಯ್ಯ ಮುಖ್ಯಮಂತ್ರಿ ನಿವಾಸ ಬಿಟ್ಟುಕೊಡದಿದ್ದಕ್ಕೆ ಹೋಟೆಲ್​ನಲ್ಲಿ ಇದ್ದದ್ದು - ಹೆಚ್ ​ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

h-d-kumaraswamy-reaction-on-s-t-somashekhar-statement
ಹೆಚ್​ ಡಿ ಕುಮಾರಸ್ವಾಮಿ - ಎಸ್​ಟಿ ಸೋಮಶೇಖರ್

By

Published : Jan 6, 2023, 8:24 PM IST

Updated : Jan 6, 2023, 8:39 PM IST

ಅವರ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತದೆ ಎಸ್​ಟಿ ಸೋಮಶೇಖರ್ ವಿರುದ್ಧ ಕುಮಾರಸ್ವಾಮಿ ಕಿಡಿ

ಬೀದರ್/ಮೈಸೂರು​:ಯಾರೋ ಒಬ್ಬ ಸರ್ಕಾರದ ಮಂತ್ರಿಗಳ ಮೇಲೆ ಪ್ರಭಾವ ಬೀರಿ ಅಧಿಕಾರ ಚಲಾಯಿಸುತ್ತಿದ್ದಾನೆ. ದುಡ್ಡಿನ ದಂಧೆ, ಬೇರೆ ಬೇರೆ ರೀತಿ ದಂಧೆಗಳನ್ನ ನಡೆಸುತ್ತಿದ್ದಾರೆ. ಅವರ ವಿಚಾರದಲ್ಲಿ ನಾನು ಚರ್ಚೆ ಮಾಡಿದ್ದೇನೆ. ಬಾಂಬೆಗೆ ಯಾರನ್ನು ಯಾರು ಕರೆದುಕೊಂಡು ಹೋಗಿದ್ದಾರೆ ಅಂತಾ ಹೇಳಿದ್ದೇನೆ. ಇವರಿಗೋಸ್ಕರ ಕರೆದುಕೊಂಡು ಹೋಗಿದ್ದಾರೆ ಎಂದು ನಾನು ಹೇಳಿದ್ದೇನಾ ಎಂದು ಹೆಚ್​ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಬೀದರ್​ನಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯ ವೇಳೆ ಮಾತನಾಡಿದ ಅವರು, ಅಮೀತ್ ಶಾ, ನಡ್ಡಾ ಬಂದರೆ ಯಾವ ಹೋಟೆಲ್​ನಲ್ಲಿ ಹಾಲ್ಟ್ ಮಾಡೋದು. ಇವರು ಮೀಟಿಂಗ್ ಮಾಡುತ್ತಾರಲ್ಲ ಯಾವ ಹೋಟೆಲ್​ನಲ್ಲಿ. ಅಮೀತ್ ಶಾ ಮೊನ್ನೆ ಬಂದಿದ್ರಲ್ಲ ಎಲ್ಲಿ ಇದ್ರು ಎಂದು ಪ್ರಶ್ನಿಸಿದ ಅವರು, ನನಗೆ ಗವರ್ನಮೆಂಟ್ ಹೌಸ್ ಕೊಡದಿದ್ದಾಗ. ಸಿದ್ದರಾಮಯ್ಯ ಆ ಮನೆ ಬೇಕು ಎಂದು ಅವರು ಅಲ್ಲೇ ಮುಂದುವರೆದರು. ಅದಕ್ಕಾಗಿ ಹೋಟೆಲ್ ನಲ್ಲಿ ಇದ್ದೆ. ವಿರಾಮ ತೆಗೆದುಕೊಳ್ಳುವುದಕ್ಕೆ ನಾನು ಹೋಟೆಲ್​ಗೆ ಹೋಗಿದ್ದೇನೆ. ಇವರ ಥರಾ ಏನು ಆಟ ಆಡೋಕೆ ಹೋಗಿದ್ನಾ ಎಂದು ಪ್ರಶ್ನಿಸಿದರು.

ಸ್ಯಾಂಟ್ರೋ ರವಿ ಬಗ್ಗೆ ಮೊಬೈಲ್​ನಿಂದ ವಿಡಿಯೋ ಬಿಡುಗಡೆ ಮಾಡಿದ ಎಚ್ ಡಿ ಕುಮಾರಸ್ವಾಮಿ:ಎಸ್ ಟಿ ಸೋಮಶೇಖರ ಕಚೇರಿಯಲ್ಲಿ ಸ್ಯಾಂಟ್ರೋ ರವಿ ಇರುವ ವಿಡಿಯೋ ಬಿಡುಗಡೆ ಮಾಡಿ ನನ್ನ ಹತ್ತಿರ ಆಟ ಆಡ್ತಿರಾ, ಬಹಳ ವಿಷಯಗಳು ಇವೆ ಬಿಡಬೇಕು ಎಂದರೆ, ಎಚ್ಚರಿಕೆಯಿಂದ ಇರಲಿ. ನನಗೆ ಕೆಣಕಿದ್ದಕ್ಕೇನೇ ಈ ವಿಡಿಯೋ ಬಿಟ್ಟಿದ್ದೇನೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ ಇದರ ಬಗ್ಗೆ ತನಿಖೆ ಮಾಡಲು ಇನ್ನೇನು ಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಅವರ ಮಾತುಗಳು ಅವರ ಸಂಸ್ಕೃತಿ ತೋರಿಸುತ್ತದೆ:ಎಸ್ ಟಿ. ಸೋಮಶೇಖರ್ ಕುಣಿಯಲಾರದ ವೇಶ್ಯೆಗೆ ನೆಲ ಡೊಂಕು ಎಂದು ಮೈತ್ರಿ ಸರ್ಕಾರದ ಬಗ್ಗೆ ಹೇಳಿದ್ದಕ್ಕೆ ತಿರುಗೇಟು ನೀಡಿರುವ ಹೆಚ್​ ಡಿ ಕುಮಾರಸ್ವಾಮಿ, ಭಾರತ ಮಾತೆಯ ಮುಂದೆ ನಿಂತು ನಮಸ್ತೆ ಸದಾ ವತ್ಸಲೆ ಎಂದು ಹೇಳುತ್ತಾರೆ. ಆದರೆ ಈ ರೀತಿಯ ಅವಾಚ್ಯ ಶಬ್ದಗಳನ್ನು ಬಳಸಿ ಅವರ ಮೂಲ ಸಂಸ್ಕೃತಿಯನ್ನು ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕುಣಿಯಲಾರದವನಿಗೆ ನೆಲ ಡೊಂಕು ಎಂಬ ರೀತಿ ಅಧಿಕಾರ ಮಾಡಲಾರದವರು ಏನೋ ಆರೋಪ ಮಾಡುತ್ತಾರೆ...

ಮೈಸೂರು -ಜನರ ಶಕ್ತಿಸೌಧವನ್ನು ಮಾಲ್​ಗೆ ಹೊಲಿಸುವುದು ಸರಿಯಲ್ಲ ಎಂದ ಎಸ್ ಟಿ. ಸೋಮಶೇಖರ್ :ವಿಧಾನ ಸೌಧವನ್ನು ಮಾಲ್ ಹಾಗೂ ಮಾರ್ಕೆಟ್​ಗೆ ಹೋಲಿಸುವುದು ಸರಿಯಲ್ಲ, ವಿಧಾನ ಸೌಧ ಎಂದರೆ ಅದು ಜನರ ಶಕ್ತಿ ಸೌಧ. ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿರುವ ಸೌಧ. ಇಡೀ ರಾಜ್ಯದ ಜನರ ರಕ್ಷಣೆ ಮಾಡುವ ಶಕ್ತಿ ಸೌಧ ಆಗಿದೆ, ಇದನ್ನ ಮಾಲ್ ಹಾಗೂ ಮಾರ್ಕೆಟ್​ಗೆ ಹೋಲಿಸುವುದು ಸರಿಯಲ್ಲ ಎಂದು ಎಂ ಎಲ್ ಸಿ. ವಿಶ್ವನಾಥ್ ಹೇಳಿಕೆಗೆ ಸಚಿವ ಎಸ್ ಟಿ ಸೋಮಶೇಖರ್ ಮೈಸೂರಿನಲ್ಲಿ ತಿರುಗೇಟು ನೀಡಿದರು.

ನಿನ್ನೆ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ವಿಧಾನ ಸೌಧ ಮಾಲ್ ಆಗಿದ್ದು, ಜನರು ದುಡ್ಡನ್ನ ಹಿಡಿದುಕೊಂಡು ಬಂದರೆ ಏನನ್ನಾದರೂ ಕೊಂಡುಕೊಂಡು ಹೋಗಬಹುದು ಎಂದು ವಿಶೇಷ ಸಂದರ್ಶನದಲ್ಲಿ ಹೇಳಿದ್ದರು.

ಪುಟ್ಟರಂಗ ಶೆಟ್ಟಿ ಕೇಸ್​ ಏನಾಯ್ತು:ನಾನು ಮೂರು ಪಕ್ಷಗಳ ಸರ್ಕಾರವನ್ನು ಹತ್ತಿರದಿಂದ ನೋಡಿದ್ದೇನೆ, ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲೇ 25 ಲಕ್ಷ ಹಣ ಸಿಕ್ಕಿತ್ತು, ತನಿಖೆ ಮಾಡಿ ಆದೇಶ ಮಾಡಿದಂತೆ ಮಾಡಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಿದ್ದೀರಿ. ಆದರೂ ಈಗ ವಿಧಾನಸೌಧವನ್ನು ಶಾಪಿಂಗ್ ಮಾಲ್​ಗೆ ಹೋಲಿಕೆ ಮಾಡಿರುವುದನ್ನು ರಾಜ್ಯದ ಜನತೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಶಕ್ತಿ ಸೌಧವನ್ನು ಮಾಲ್​ಗೆ ಹೋಲಿಸಿರುವವರಿಗೆ ಸ್ವಲ್ಪ ಬುದ್ಧಿ ಕಡಿಮೆ ಎಂದು ಸಚಿವ ಸೋಮಶೇಖರ್ ಪರೋಕ್ಷವಾಗಿ ವಿಶ್ವನಾಥ್ ಹೆಸರನ್ನು ಹೇಳದೇ ಟೀಕಿಸಿದರು.

ಕುಣಿಯಲಾರದವನಿಗೆ ನೆಲ ಡೊಂಕು:ಸಮ್ಮಿಶ್ರ ಸರ್ಕಾರವನ್ನ ಕೆಡವಿ ಶಾಸಕರು ಮುಂಬೈನಲ್ಲಿ ಇದ್ದಾಗ, ಮೋಜು ಮಸ್ತಿಗಾಗಿ ಸ್ಯಾಂಟ್ರೋ ರವಿ ಹುಡುಗಿಯರನ್ನ ಸಪ್ಲೈ ಮಾಡಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಎಸ್ ಟಿ. ಸೋಮಶೇಖರ್ ಕುಣಿಯಲಾರದವನಿಗೇ ನೆಲ ಡೊಂಕು ಎಂಬಂತೆ, ಚುನಾವಣೆಯನ್ನು ಗೆಲ್ಲಲು ಆಗದ ಸ್ಥಿತಿಯಲ್ಲಿರುವ ಕುಮಾರಸ್ವಾಮಿ 3 ವರ್ಷ ಸುಮ್ಮನಿದ್ದು ಈಗ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಸಿಎಂ ಆಗಿದ್ದಾಗ ಕುಮಾರಸ್ವಾಮಿ ಸರಿಯಾಗಿ ಆಡಳಿತ ನಡೆಸಲಿಲ್ಲ, ಫೈವ್ ಸ್ಟಾರ್ ಹೋಟೆಲ್​ನಲ್ಲಿ ಕುಳಿತು ಆಡಳಿತ ಮಾಡಿದ್ದರಿಂದ ನಾವೆಲ್ಲ ಬೇಸತ್ತು ಹೋಗಿದ್ದೆವು. ಇವರು ಸರಿಯಾಗಿ ಆಡಳಿತ ನಡೆಸಿದ್ದರೆ ಐದು ವರ್ಷ ಅವರೆ ಮುಖ್ಯಮಂತ್ರಿ ಆಗಿ ಇರುತ್ತಿದ್ದರು. ಅವರು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ಕೊಡಲಿ, ತನಿಖೆ ಮಾಡಿಸುತ್ತೇವೆ ಎಂದು ಕುಮಾರಸ್ವಾಮಿಗೆ ಎಸ್​ ಟಿ ಸೋಮಶೇಖರ್​ ಪ್ರತಿ ಸವಾಲು ಹಾಕಿದರು.

ಇದನ್ನೂ ಓದಿ:ಸ್ಯಾಂಟ್ರೋ ರವಿ ವಿರುದ್ಧ ಯಾವುದೇ ದೂರಿದ್ದರೂ ತನಿಖೆ : ಗೃಹ ಸಚಿವ ಆರಗ ಜ್ಞಾನೇಂದ್ರ

ಕೆ.ಕೆ.ಗೆಸ್ಟ್ ಹೌಸ್ ಸ್ಯಾಂಟ್ರೋ ರವಿಯ ಹೆಡ್ ಆಫೀಸ್​ ಆಗಿದ್ದು ಹೇಗೆ ?: ಕಾಂಗ್ರೆಸ್ ಸರಣಿ ಟ್ವೀಟ್

Last Updated : Jan 6, 2023, 8:39 PM IST

ABOUT THE AUTHOR

...view details