ಕರ್ನಾಟಕ

karnataka

ವಿಧಾನಸಭೆ ಅಧಿವೇಶನದಲ್ಲಿ ನ್ಯಾ. ಸದಾಶಿವ ಆಯೋಗದ ವರದಿ ಕುರಿತು ಚರ್ಚಿಸುವಂತೆ ಮನವಿ

By

Published : Sep 14, 2020, 9:36 PM IST

ಉಪಜಾತಿಗಳಿಗೆ ಆದ್ಯತೆ ಮೇರೆಗೆ ಮೀಸಲಾತಿ ನೀಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಕೂಡ ರಾಜ್ಯ ಶಾಸನಸಭೆಗೆ ನಿರ್ದೇಶನ ನೀಡಿದೆ. ಆದರೆ, ಸರ್ಕಾರ ಈವರೆಗೂ ವರದಿ ಜಾರಿಗೆ ಮುಂದಾಗದಿರುವುದು ಬೇಸರ ತಂದಿದೆ..

Forced to discuss Sadashiva Commission's report in the Assembly session
ವಿಧಾನಸಭೆ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಕುರಿತು ಚರ್ಚಿಸುವಂತೆ ಮನವಿ

ಬಸವಕಲ್ಯಾಣ(ಬೀದರ್):ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಲು ಮಾದಿಗ ದಂಡೋರಾ ಹೋರಾಟ ಸಮಿತಿ ಮನವಿ ಮಾಡಿದೆ.

ವಿಧಾನಸಭೆ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಕುರಿತು ಚರ್ಚಿಸುವಂತೆ ಮನವಿ

ಈ ಕುರಿತು ಸ್ಥಳೀಯ ಶಾಸಕ ಬಿ.ನಾರಾಯಣರಾವ್​ಗೆ ಬರೆದ ಮನವಿ ಪತ್ರವನ್ನು ಶಾಸಕರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಮಿರ್ ಅಜರಲಿ ನವರಂಗ ಅವರಿಗೆ ಸಲ್ಲಿಸಲಾಯಿತು. ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸುವಂತೆ ನಿರಂತರ ಹೋರಾಟ ಮಾಡಲಾಗುತ್ತಿದೆ.

ಉಪಜಾತಿಗಳಿಗೆ ಆದ್ಯತೆ ಮೇರೆಗೆ ಮೀಸಲಾತಿ ನೀಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಕೂಡ ರಾಜ್ಯ ಶಾಸನಸಭೆಗೆ ನಿರ್ದೇಶನ ನೀಡಿದೆ. ಆದರೆ, ಸರ್ಕಾರ ಈವರೆಗೂ ವರದಿ ಜಾರಿಗೆ ಮುಂದಾಗದಿರುವುದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸುವ ಮೂಲಕ ವರದಿ ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ABOUT THE AUTHOR

...view details