ಬೀದರ್:ಭಾರತೀಯ ವಾಯುಪಡೆಯಲ್ಲಿ ಇಂದು ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ. ತಂದೆ - ಮಗಳು ಒಟ್ಟಿಗೆ ಫೈಟರ್ ಜೆಟ್ ಹಾರಿಸಿದ್ದಾರೆ. ಫ್ಲೈಯಿಂಗ್ ಆಫೀಸರ್ ಆಗಿರುವ ಅನನ್ಯಾ ಮತ್ತು ಏರ್ ಕಮೋಡೋರ್ ಆಗಿರುವ ಸಂಜಯ್ ಶರ್ಮಾ ಈ ದಾಖಲೆ ಬರೆದಿದ್ದಾರೆ. ಜೊತೆಗೆ ಭಾರತೀಯ ವಾಯುಪಡೆಯಲ್ಲಿ ಈ ಸಾಧನೆ ಮಾಡಿದ ಮೊದಲ ತಂದೆ - ಮಗಳ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬೀದರ್ನ ಐಎಎಫ್ ಸ್ಟೇಷನ್ನಲ್ಲಿ ಹಾಕ್-132 ವಿಮಾನವನ್ನ ಒಟ್ಟಿಗೆ ಹಾರಿಸಿರುವ ಅನನ್ಯಾ ಹಾಗೂ ತಂದೆ ಸಂಜಯ್ ಶರ್ಮಾ ಈ ಇತಿಹಾಸ ಸೃಷ್ಟಿಸಿದ್ದು,ಫ್ಲೈಯಿಂಗ್ ಆಫೀಸರ್ ಆಗಿರುವ ಅನನ್ಯಾ ಉನ್ನದ ಯುದ್ಧ ವಿಮಾನದಲ್ಲಿ ಪದವಿ ಪಡೆದು, ತರಬೇತಿ ಪಡೆದುಕೊಳ್ಳುತ್ತಿರುವ ಮೊದಲ ತರಬೇತುದಾರರಾಗಿದ್ದಾರೆ.