ಬೀದರ್:ನಿರಂತರ ಬರಗಾಲ, ಬಾರದ ಮಳೆಯಿಂದಾಗಿ ಕಂಗ್ಗೆಟ್ಟು ಸಾಲಬಾಧೆ ತಾಳಲಾರದೆ ರೈತ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಾಲಬಾಧೆ ತಾಳದೆ ಬಾವಿಗೆ ಹಾರಿ ರೈತ ಮಹಿಳೆ ಆತ್ಮಹತ್ಯೆ - ಸಾಲ ಬಾಧೆ
ನಿರಂತರ ಬರಗಾಲ, ಬಾರದ ಮಳೆಯಿಂದಾಗಿ ಕಂಗ್ಗೆಟ್ಟು ಸಾಲಬಾಧೆ ತಾಳಲಾರದೆ ರೈತ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಜಿಲ್ಲೆಯ ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದ ರತ್ನಮ್ಮಾ ಚಿದ್ರಿ(50) ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರು ಹೈನುಗಾರಿಕೆ ಜೊತೆಯಲ್ಲಿ ಕೃಷಿ ಮಾಡುತ್ತ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದರು. ಈ ವೇಳೆ ರತ್ನಮ್ಮಾ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಮದುವೆ, ಕೃಷಿಗೆ ಬೇಕಾದ ವಸ್ತು ಖರೀದಿಗಾಗಿ ಖಾಸಗಿ ಹಾಗೂ ವಿವಿಧ ಬ್ಯಾಂಕ್ಗಳಲ್ಲಿ ಸುಮಾರು 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.
ಕಳೆದ ನಾಲ್ಕು ವರ್ಷದಿಂದ ಸಕಾಲಕ್ಕೆ ಮಳೆಯಾಗದೆ ಬೀಜ, ಗೊಬ್ಬರ ಹೀಗೆ ಸಾಲ ಮಾಡಿಕೊಂಡು ಹಾಕಿದ ದುಡ್ಡು ಹಿಂದಿರುಗಿ ಬಾರದೆ ಸಂಕಷ್ಟಕ್ಕೆ ಸಿಲುಕಿದ ಮಹಿಳೆ ತನ್ನ ಜಾಮೀನಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.