ಬಸವಕಲ್ಯಾಣ:ಲಾಕ್ಡೌನ್ನಿಂದಾಗಿ ದೇಶದಲ್ಲಿ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಸೇರಿ ಇತರ ಯೋಜನೆಯಡಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ಬಡವರಿಗೆ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ'ಯಡಿ ಸೌಲಭ್ಯ: ಭಗವಂತ ಖೂಬಾ
ದೇಶದಲ್ಲಿ ಕೊರೊನಾ ವೈರಸ್‌ನಿಂದ ಸಂಕಷ್ಟ ಎದುರಾಗಿದ್ದು,ಇಂತಹ ಸಂದರ್ಭದಲ್ಲಿ ಭಾರತಿಯ ಜನತಾ ಪಕ್ಷ ಸೇವಾ ಕಾರ್ಯ ಮಾಡುತ್ತಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.
ನಗರದ ಬಸ್ ನಿಲ್ದಾಣ ಸಮೀಪದ ಲಾಲ್ ತಲಾಬ ಪ್ರದೇಶದಲ್ಲಿ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಸಂಸದರು, ದೇಶದಲ್ಲಿ ಕೊರೊನಾ ವೈರಸ್‌ನಿಂದ ಸಂಕಷ್ಟ ಎದುರಾಗಿದ್ದು,ಇಂತಹ ಸಂದರ್ಭದಲ್ಲಿ ಭಾರತಿಯ ಜನತಾ ಪಕ್ಷ ಸೇವಾ ಕಾರ್ಯ ಮಾಡುತ್ತಿದೆ ಎಂದರು.
ಇಲ್ಲಿಯ ನಗರ ಘಟಕ, ಗ್ರಾಮೀಣ ಘಟಕ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಬಡವರ ನೆರವಿಗೆ ಮುಂದಾಗಿದ್ದು, ಬಡವರಿಗೆ ಹಾಲು, ಆಹಾರ ಪದಾರ್ಥದ ಕಿಟ್ ವಿತರಿಸುವ ಮೂಲಕ ಉತ್ತಮವಾಗಿ ಸೇವಾ ಕಾರ್ಯ ಮಾಡುತ್ತಿದ್ದಾರೆ. ಜಿ.ಪಂ. ಮಾಜಿ ಅಧ್ಯಕ್ಷ ಅನೀಲ್ ಭೂಸಾರೆ ಅವರು ಸಾವಿರಾರು ಜನ ಬಡವರಿಗೆ ಆಹಾರದ ಕಿಟ್ ವಿತರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.