ಬೀದರ್: ಕಳೆದ ಬಾರಿ ಮೋದಿ ಅಲೆಯಲ್ಲಿ ಗೆದ್ದು ಬಂದ ಬಿಜೆಪಿಯ ಭಗವಂತ ಖೂಬಾ ಅವರು ಮತ್ತೊಮ್ಮೆ ಅದೇ ಹವಾದಲ್ಲಿ ಕಮಲ ಅರಳಿಸಲಿಕ್ಕಾಗೊಲ್ಲ. ಕಾಂಗ್ರೆಸ್ನ ಈಶ್ವರ್ ಖಂಡ್ರೆ ಕಮಾಲ್ ಮಾಡ್ತಾರೆ ಎಂದು ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್ ಅಭಿಮತ ವ್ಯಕ್ತಪಡಿಸಿದ್ದಾರೆ.
ಬೀದರ್ನಲ್ಲಿ 'ಕಮಲ' ಅರಳಲ್ಲ, ಖಂಡ್ರೆ 'ಕಮಾಲ್' ಮಾಡ್ತಾರೆ: ಮೀನಾಕ್ಷಿ ಸಂಗ್ರಾಮ್
ಕ್ಷೇತ್ರವಾರು, ಜಾತಿವಾರು ಮತ್ತು ವೈಯಕ್ತಿಕ ವರ್ಚಸ್ಸಿನಲ್ಲಿ ಈಶ್ವರ್ ಖಂಡ್ರೆ ಮುನ್ನಡೆ ಸಾಧಿಸಲಿದ್ದು, ಜಿಲ್ಲೆಯಲ್ಲಿ ಮೋದಿ ಹವಾ ಇಲ್ಲ. ಖಂಡ್ರೆ ಅವರ ಜೋರೆ ಜಾಸ್ತಿ ಇದೆ ಎಂದು ಮೀನಾಕ್ಷಿ ಸಂಗ್ರಾಮ್ ಅಭಿಮತ ವ್ಯಕ್ತಪಡಿಸಿದ್ದಾರೆ.
ಬೀದರ್ನಲ್ಲಿ ಈಟಿವಿ ಭಾರತ ಜತೆ ಮಾತನಾಡಿದ ಅವರು, ಕಳೆದ ಬಾರಿ ಮಾಜಿ ಸಿಎಂ ದಿ. ಧರಂಸಿಂಗ್ ಅವರ ಎದುರು ಸ್ಪರ್ಧಿಸಿ ಮೋದಿ ಹವಾದಲ್ಲಿ ಚುನಾವಣೆ ಗೆದ್ದವರು ಬಿಜೆಪಿಯ ಭಗವಂತ ಖೂಬಾ. ಅವರ ವೈಯಕ್ತಿಕ ವರ್ಚಸ್ಸು ಕ್ಷೇತ್ರದಲ್ಲಿಲ್ಲ. ಕಾಂಗ್ರೆಸ್ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಕಣದಲ್ಲಿದ್ದಾರೆ. ಐದು ದಶಕಗಳಿಂದ ಜಿಲ್ಲೆಯ ರಾಜಕಾರಣದಲ್ಲಿ ಖಂಡ್ರೆ ಕುಟುಂಬದ ಕೊಡುಗೆ ಅಪಾರ ಇದೆ. ಮೊದಲಿನಿಂದಲೂ ಸಸತ ಚುನಾವಣೆಯಲ್ಲಿ ಖಂಡ್ರೆ ಕುಟುಂಬ ಸ್ಪರ್ಧಿಸಲಿ ಎಂಬ ಅಭಿಪ್ರಾಯ ಜನ ವ್ಯಕ್ತಪಡಿಸಿದ್ದರು. ಅದು ಈ ಬಾರಿ ಕೂಡಿ ಬಂದಿದೆ ಎಂದರು.
ಕ್ಷೇತ್ರದ ಒಟ್ಟು ಎಂಟು ವಿಧಾನಸಭೆಗಳ ಪೈಕಿ ಐದು ಸ್ಥಾನ ಕಾಂಗ್ರೆಸ್ ಹಾಗೂ ಎರಡು ಸ್ಥಾನದಲ್ಲಿ ಬಿಜೆಪಿ, ಒಂದು ಮೈತ್ರಿ ಅಂಗವಾದ ಜೆಡಿಎಸ್ ಬಲದಿಂದ ಕೂಡಿದೆ. ಕ್ಷೇತ್ರವಾರು, ಜಾತಿವಾರು ಮತ್ತು ವೈಯಕ್ತಿಕ ವರ್ಚಸ್ಸಿನಲ್ಲಿ ಈಶ್ವರ್ ಖಂಡ್ರೆ ಮುನ್ನಡೆ ಸಾಧಿಸಲಿದ್ದು, ಜಿಲ್ಲೆಯಲ್ಲಿ ಮೋದಿ ಹವಾ ಇಲ್ಲ. ಖಂಡ್ರೆ ಅವರ ಜೋರೆ ಜಾಸ್ತಿ ಇದೆ ಎಂದರು.