ಬೀದರ್: ಕೊರೊನಾ ವೈರಸ್ಗೂ ಮಾಂಸದೂಟ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಧಾರಾಳವಾಗಿ ಮೊಟ್ಟೆ, ಚಿಕನ್, ಮಟನ್ ತಿನ್ನಿ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.
'ಮೊಟ್ಟೆ, ಮಾಂಸ ಧಾರಾಳವಾಗಿ ತಿನ್ನಿ ಏನೂ ಆಗೋಲ್ಲ'
ಮಾಂಸಾಹಾರ ತಿನ್ನುವುದಕ್ಕೂ ಕೊರೊನಾ ವೈರಸ್ಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಪ್ರಭು ಚವ್ವಾಣ ಹೇಳಿದ್ದಾರೆ.
ನಗರದ ಸಚಿವರ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ವೈರಸ್ ಬಂದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಸುಳ್ಳು ಅಪಪ್ರಚಾರ ಮಾಡಲಾಗ್ತಿದೆ. ಹೀಗಾಗಿ ಜನರು ಮಾಂಸಾಹಾರ ತಿನ್ನೋದನ್ನೇ ಬಿಟ್ಟುಬಿಟ್ಟಿದ್ದಾರೆ ಎಂದರು.
ಅಲ್ಲದೇ ಜಿಲ್ಲೆಯಾದ್ಯಂತ ಬಡವರಿಗೆ ಪ್ರತಿ ನಿತ್ಯ 10 ಸಾವಿರ ಲೀಟರ್ ಹಾಲು ಸರಬರಾಜು ಮಾಡಲಾಗ್ತಿದೆ. ಸಂಕಷ್ಟದ ಈ ಘಳಿಗೆಯಲ್ಲಿ ಬಡವರ ಬೆನ್ನಿಗೆ ಸರ್ಕಾರ ನಿಂತಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೊದಿ ಅವರು ನಾಳೆ ಕರೆ ನೀಡಿದ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಿ ಕೊರೊನಾ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಕರೆ ಕೊಟ್ಟರು.