ಕರ್ನಾಟಕ

karnataka

ETV Bharat / state

ಬೀದರ್​​ನಲ್ಲಿ ಕೊರೊನಾ ಸೋಂಕಿತ ಸಾವು... ಮೂರಕ್ಕೇರಿದ ಸಾವಿನ ಸಂಖ್ಯೆ!

ವಿದ್ಯಾನಗರ ಬಡಾವಣೆಯ P-1712 ಕಳೆದ ಹತ್ತು ದಿನಗಳ ಹಿಂದೆ ಕೊರೊನಾ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಬೀದರ್
ಬೀದರ್

By

Published : May 27, 2020, 1:02 PM IST

ಬೀದರ್:ಕಳೆದ ವಾರ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 50 ವರ್ಷದ ವ್ಯಕ್ತಿ ಇಂದು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ.

ಇಲ್ಲಿನ ವಿದ್ಯಾನಗರ ಬಡಾವಣೆಯ P-1712 ಕಳೆದ ಹತ್ತು ದಿನಗಳ ಹಿಂದೆ ಕೊರೊನಾ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈತನಿಗೆ ಮಧುಮೇಹ, ರಕ್ತದೊತ್ತಡ, ಗ್ಯಾಂಗ್ರೀನ್​ ಸೇರಿದಂತೆ ಹಲವು ಕಾಯಿಲೆಗಳಿದ್ದವು ಎನ್ನಲಾಗಿದೆ. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಪೊಲೀಸರಿಗೆ ಕ್ವಾರಂಟೈನ್​:

ಸಾವನ್ನಪ್ಪಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿ ಜೂಜಾಟದಲ್ಲಿ ತೊಡಗಿದ್ದ ವೇಳೆ ಚಿಟಗುಪ್ಪ ಪೊಲೀಸರು ಬಂಧಿಸಿದ್ದರು. ಹೀಗಾಗಿ 14 ಜನ ಸಿಬ್ಬಂದಿ ಕ್ವಾರಂಟೈನ್​ನಲ್ಲಿದ್ದಾರೆ.

ABOUT THE AUTHOR

...view details