ಕರ್ನಾಟಕ

karnataka

ETV Bharat / state

ತಹಶೀಲ್ದಾರ್​ ಸಾವಿತ್ರಿ ಶರಣು ಸಲಗರ‌ಗೂ ವಕ್ಕರಿಸಿದ ಕೊರೊನಾ

ತಹಶೀಲ್ದಾರ್​ ಸಾವಿತ್ರಿ ಶರಣು ಸಲಗರ ಅವರಿಗೆ ಕೊರೊನಾ ಸೊಂಕು ಇರುವುದು ಧೃಡವಾಗಿದೆ. ಲಾಕ್‌ಡೌನ್ ಸಂದರ್ಭ ಸೇರಿದಂತೆ ದೈನಂದಿನ ಕಚೇರಿ ಚಟುವಟಿಕೆಯಲ್ಲಿ ತೊಡಗಿದ್ದ ಇವರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ.

Corona positive to Tahsildar
ತಹಶೀಲ್ದಾರ್​ ಸಾವಿತ್ರಿ ಸಲಗರ್‌ಗೂ ವಕ್ಕರಿಸಿದ ಕೊರೊನಾ

By

Published : Jul 30, 2020, 2:33 AM IST

Updated : Jul 30, 2020, 2:49 AM IST

ಬಸವಕಲ್ಯಾಣ (ಬೀದರ್​): ನಗರ ಸೇರಿದಂತೆ ತಾಲೂಕಿನಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೊನಾ ಈಗ ತಹಶೀಲ್ದಾರ್​ರಿಗೂ ವಕ್ಕರಿಸಿದ್ದು, ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಸ್ಥಳೀಯ ಶಾಸಕರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಲ್ಲಿ ಆತಂಕ ಮನೆ ಮಾಡಿದೆ.

ತಹಶೀಲ್ದಾರ್​ ಸಾವಿತ್ರಿ ಶರಣು ಸಲಗರ ಅವರಿಗೆ ಕೊರೊನಾ ಸೊಂಕು ಇರುವುದು ಧೃಡವಾಗಿದೆ. ಸೀತ, ಜ್ವರ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್​ ಹಾಗೂ ಅವರ 12 ವರ್ಷದ ಪುತ್ರನಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ರ‍್ಯಾಪಿಡ್ ಟೆಸ್ಟ್( ಆ್ಯಂಟಿಜನ್ ಟೆಸ್ಟ್)ನಡೆಸಿದಾಗ ಇಬ್ಬರಿಗೂ ಸೋಂಕು ಇರುವುದು ಧೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಲಾಕ್‌ಡೌನ್ ಸಂದರ್ಭ ಸೇರಿದಂತೆ ದೈನಂದಿನ ಕಚೇರಿ ಚಟುವಟಿಕೆಯಲ್ಲಿ ತೊಡಗಿದ್ದ ಇವರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಹಶೀಲ್ದಾರ್​, ವೈದ್ಯರ ಸಲಹೆ ಮೇರೆಗೆ ಹೊಂ ಐಸುಲೆಷನ್‌ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕ, ಅಧಿಕಾರಿಗಳಿಗೆ ಆತಂಕ:

ತಹಶೀಲ್ದಾರ್​ ಅವರಿಗೆ ಕೊರೊನಾ ದೃಢಪಡುತಿದ್ದಂತೆ ಸ್ಥಳೀಯ ಶಾಸಕ ಬಿ.ನಾರಾಯಣರಾವ್​ ಸೇರಿದಂತೆ ತಾಲೂಕಿನ ಪೊಲೀಸ್ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಸೋಂಕು ಹರಡುವ ಭೀತಿ ಶುರುವಾಗಿದೆ. ಬಕ್ರಿದ್​ ಹಬ್ಬದ ನಿಮಿತ್ತ ಮುಂಜಾಗೃತ ಕ್ರಮವಾಗಿ ಮಂಗಳವಾರ ಸಂಜೆ ನಗರದ ಭೋಸ್​ಗೆ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ತಹಶೀಲ್ದಾರ್​ ಜೊತೆ ಸ್ಥಳೀಯ ಶಾಸಕ ನಾರಾಯಣರಾವ ಸೇರಿದಂತೆ ಸಿಪಿಐ, ಪಿಎಸ್‌ಐ ಹಾಗೂ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು. ಹೀಗಾಗಿ ಶಾಸಕರು, ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಪ್ರಮುಖರಿಗೆ ಆತಂಕ ಎದುರಾಗಿದೆ.

Last Updated : Jul 30, 2020, 2:49 AM IST

ABOUT THE AUTHOR

...view details