ಬಸವಕಲ್ಯಾಣ: ತಾಲೂಕಿನ ಮಂಠಾಳ ಗ್ರಾಮದಲ್ಲಿ ಮೂವರು ಸೋಂಕಿತ ವ್ಯಕ್ತಿಗಳಿಗೆ ವರದಿ ಬರುವ ಮುನ್ನವೆ ಕ್ವಾರಂಟೈನ್ ಕೇಂದ್ರದಿದದ ಬಿಡುಗಡೆ ಮಾಡಲಾಗಿತ್ತು. ಆದರೆ, ಬಿಡುಗಡೆಗೊಂಡ 3 ಜನರಲ್ಲಿ ಕೊರೊನಾ ಪಾಸಿಟಿವ್ ದೃಢ ಪಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಅಧಿಕಾರಿಗಳ ಎಡವಟ್ಟು: ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಗೊಂಡ ಮೂವರಿಗೆ ಕೊರೊನಾ ಪಾಸಿಟಿವ್
ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಮೂವರು ಸೋಂಕಿತ ವ್ಯಕ್ತಿಗಳ ವರದಿ ಬರುವ ಮುನ್ನವೆ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿದ್ದು, ಬಿಡುಗಡೆಗೊಂಡ ಮೂವರು ಗ್ರಾಮದ ತುಂಬೆಲ್ಲ ಸುತ್ತಾಡಿದ್ದಾರೆ. ಹೀಗಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಬಿಡುಗಡೆಗೊಂಡ ಮೂವರು ವ್ಯಕ್ತಿಗಳು ಗ್ರಾಮದ ಹೋಟೆಲ್, ಕಿರಾಣಿ ಅಂಗಡಿ, ಪೆಟ್ರೋಲ್ ಬಂಕ್ ಸೇರಿದಂತೆ ಗ್ರಾಮದ ವಿವಿಧಡೆ ಸಂಚರಿಸಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ವರದಿ ಬರುವ ಮುನ್ನ ಕ್ವಾರಂಟೈನ್ ಕೇಂದ್ರದಿಂದ ಯಾರನ್ನೂ ಬಿಡಬಾರದು ಎನ್ನುವ ನಿಯಮವಿದ್ದರೂ ಸಹ ಈ ಮೂವರನ್ನು ಬಿಡುಗಡೆ ಮಾಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳೀಯ ಆಡಳಿತ ಮಾಡಿದ ಎಡವಟ್ಟಿಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಗುರುವಾರ ಸಂಜೆ ಬಿಡುಗಡೆಗೊಂಡ ಹೆಲ್ತ್ ಬುಲೆಟಿನ್‌ನಲ್ಲಿ ಮಂಠಾಳ ಗ್ರಾಮದಲ್ಲಿ ಬಿಡುಗಡೆಗೊಂಡ 3 ಜನರಲ್ಲಿ ಕೊರೊನಾ ಪಾಸಿಟಿವ್ ಇರುವ ಬಗ್ಗೆ ಖಚಿತವಾದ ಮೇಲೆ ಎಚ್ಚೆತ್ತ ಸ್ಥಳೀಯ ಆಡಳಿತ, ಈ ಮೂವರನ್ನು ಮನೆಯಿಂದಲೇ ಕರೆದುಕೊಂಡು ಬೀದರನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಸೋಂಕಿತರ ಮನೆಯ ಸದಸ್ಯರೆಲ್ಲರನ್ನೂ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿ ಸಲಾಗಿದೆ. ವರದಿ ಬರುವ ಮುನ್ನವೆ ಸೋಂಕಿತರನ್ನು ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಗೊಳಿಸಿದ ಸ್ಥಳೀಯ ಆಡಳಿತದ ನಿರ್ಲಕ್ಷಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾವಿನ ಹಣ್ಣು ಮಾರಿದ ಪತ್ನಿ: ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯೊಬ್ಬನ ಪತ್ನಿ ನಿರಂತರವಾಗಿ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿ ಆತನಿಗೆ ಊಟ ನೀಡುವುದು, ಆತನ ಬಟ್ಟೆ ಮನೆಗೆ ತಂದು ಕ್ಲೀನ್ ಮಾಡಿ ಕೊಡುವುದು ಮಾಡಿದ್ದಾಳೆ| ಅಷ್ಟೇ ಅಲ್ಲ ಮಂಠಾಳ ಗ್ರಾಮ ಹಾಗೂ ಬಸವಕಲ್ಯಾಣ ನಗರದಲ್ಲಿ ಮಾವಿನ ಹಣ್ಣು ಮಾರಾಟ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.